•ನಮ್ಮ ಕೋಲಾರ•....
•ನಮ್ಮ ಚಿನ್ನದಂತಹ ಕೋಲಾರ ಜಿಲ್ಲೆಯು ವಿಶ್ವದಲ್ಲಿಯೇ ಖ್ಯಾತಿಯನ್ನು ತಂದುಕೊಟ್ಟ , ಪುರಾತನ ಇತಿಹಾಸವುಳ್ಳ ಹಾಗೂ ವಿಶ್ವಕ್ಕೇ ಶೇಖಡಾ 75% ಚಿನ್ನವನ್ನು ಕೊಡುಗೆ ನೀಡಿದ ನಮ್ಮ ಕೆ.ಜಿ.ಎಫ್.(ಕೋಲಾರದ ಚಿನ್ನದ ಗಣಿ) ಹೆಸರಿನ ಚಿತ್ರವು 21-12-2018 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ಚಿತ್ರವು ನಮ್ಮ ಕನ್ನಡದ ಸ್ಯಾಂಡಲ್ ವುಡ್ ನ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ಉಳಿಯಲಿದೆ.
•"K.G.F." ಚಿತ್ರವು ಪಂಚ ಭಾಷೆಗಳಲ್ಲಿ ತಯಾರಾಗುತ್ತಿರುವ ಬಹುಕೋಟಿ ಬಜೆಟ್ ನ ಅಪ್ಪಟ ಕನ್ನಡ ಚಿತ್ರವಾಗಿದೆ. ಭಾಗಶಃ ಚಿತ್ರವನ್ನು ನಮ್ಮ ಕೆ.ಜಿ.ಎಫ್ ನ ಸಯನೈಡ್ ದಿಬ್ಬಗಳಲ್ಲಿ ,ಚಿಂತಾಮಣಿ ರೈಲ್ವೆ ನಿಲ್ದಾಣ ಹಾಗೂ ಕೋಲಾರದ ಹಲವು ಭಾಗಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ.ನಮ್ಮ ಕೋಲಾರದ ಚಿನ್ನದ ಗಣಿಗಳ ಇತಿಹಾಸ ಹಾಗೂ 19 ನೇ ಶತಮಾನದ ಚಿನ್ನದ ಗಣಿಯ ಕಾರ್ಮಿಕರ ಕುರಿತಾದ ಚಿತ್ರದಂತೆ ಕಾಣುವ "ಕೆ.ಜಿ.ಎಫ್." ನ ನಾಯಕ ರಾಕಿಂಗ್ ಸ್ಟಾರ್ "ಯಶ್" ಮತ್ತು ಚಿತ್ರತಂಡಕ್ಕೆ ಹೆಚ್ಚಿನ ಯಶಸ್ಸು ಸಿಗಲಿ ಮತ್ತು ಪ್ರಪಂಚಾದ್ಯಂತ ಈ ಚಿತ್ರವು ಉತ್ತಮ ಖ್ಯಾತಿ ಗಳಿಸಲೆಂದು ಹಾರೈಸೋಣ.