ಇದು ಒಂದು ಉತ್ಸಾಹ ಭರಿತ ಚಲನ ಚಿತ್ರವಾದರೂ ಇದರಲ್ಲಿ ಮೂಡಿರುವ ಪಾತ್ರಗಳು ನಿಜವಾಗಿದೆ. ಪೋಲೀಸ್ ಅಧಿಕಾರಿಯು ತನ್ನ ಧಕ್ಷತೆ ಮತ್ತು ಪ್ರಾಮಾಣಿಕವಾಗಿ ನಿಸ್ವಾರ್ಥ ಸೇವಯನ್ನು ಈ ಚಿತ್ರದ ಮೂಲಕ ಮನಗಾಣ ಬಹುದು. ಹಾಗೂ ಚಿಕ್ಕಮಗಳೂರಿನಲ್ಲಿ ವಾಸವಾಗಿರುವ ಜನರು ಅಂದರೆ ಈ ಚಿತ್ರಿಕರಣ ಸಂಧರ್ಬದಲ್ಲಿ ಈ ಸಿನಿಮಾ ಕಥೆಯು ನಿಜವೆಂದೂ ಹೇಳುವುದು ಉಂಟು ಐ.ಪಿ.ಎಸ್ ಅಧಿಕಾರಿ ಸಾಂಗ್ಲಿಯಾನ ಅವರು ಚಿಕ್ಕಮಗಳೂರಿನಲ್ಲಿ ಕಾರ್ಯ ನಿರ್ವಹಿಸಿದ ಉದ್ದೇಶವನ್ನು ನಾವು ಪರೀಶಿಲಿಸಬೇಕಾಗಿದೆ. ಆದರೆ ಇಲ್ಲಿ ಈಗ ಇರುವ ಜನರಿಗೆ ಸಾಂಗ್ಲಿಯಾನ ಎಂಬ ಅಧಿಕಾರಿ ಇದ್ದರೂ ಎಂಬ ಮಾಹಿತಿ ಇದ್ದರೂ ಎನ್ನುವುದು ಬಿಟ್ಟರೇ ಯಾವ ಕಾರಣಕ್ಕೆ ನಮ್ಮ ಚಿಕ್ಕಮಗಳೂರಿಗೆ ಈ ಧಕ್ಷ ಅಧಿಕಾರಿ ಬಂದರೂ ಎಂದು ಯಾರೂ ಅರಿಯರು. ಆದರೆ ಈ ಚಿತ್ರದಲ್ಲಿ ಕಲ್ಲೆ ಗೌಡ ಎಂಬ ಪಾತ್ರವು ಕಾಣ ಸಿಗುತ್ತದೆ ಈ ಪಾತ್ರವನ್ನು ಹಾಸ್ಯ ನಟ ದೊಡ್ಡಣ್ಣ ಕಳ ನಟನಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಕಲ್ಲೆಗೌಡ ಎಂಬ ಪಾತ್ರವೂ ನಿಜವೆಂಬೂವುದು ಆಗಿನ ಕಾಲದ ಜನರ ಬಾಯಲ್ಲಿ ಕೇಳಿ ಬರುತ್ತದೆ. ಕಲ್ಲೆ ಗೌಡ ನ ನಿಜವಾದ ಹೆಸರು ಸೂರ್ಯಗೌಡ ಅಥಾವ ನಾರಾಯಣ ಗೌಡ ಎಂದು ಕೆಲವರ ಅಭಿಪ್ರಾಯ. ಚಿತ್ರದಲ್ಲಿ ಕಲ್ಲೇಗೌಡ ತನ್ನ ಪತ್ನಿಯನ್ನು ಸಾಯಿಸುವುದು ಸಾಂಗ್ಲಿಯಾನ ಗೆ ತಿಳಿದು ಬರುತ್ತದೆ ಎಂದೂ ನಾವು ಚಿತ್ರದಲ್ಲಿ ತಿಳಿಯಬಹುದು. ಅದು ನಿಜವಾದ ಘಟನೆ ಎಂಬುದು ಆಗಿನ ಕಾಲದ ಜನರ ಮಾತೂ ಆ ಕೇಸ ಬಗೆಹರಿಸಲೂ ಸಾಂಗ್ಲೀಯಾನ ಮಾರುವೇಷದಲ್ಲಿ ಚಿಕ್ಕಮಗಳೂರಿಗೆ ಬಂದೂರು ಎಂದೂ ಹೇಳುವುದು ಉಂಟು. ಆದರೆ ಚಿತ್ರದ ಕಥೆ ಹಾಗೂ ನೈಜ ಕಥೆಯನ್ನು ಯಾರೂ ಬಲ್ಲರೂ. ಈ ಚಲನ ಚಿತ್ರವೂ ನಿಜವೂ ಆಗಿರಬಹುದು ಇಲ್ಲಾ ಸುಳ್ಳಾಗಿರಬಹುದು. ಆದರೂ ಈ ಚಲನ ಚಿತ್ರವೂ ಒಂದೂ ಅದ್ಬೂತ ಮನರಂಜನೆಯ ಚಿತ್ರವೆಂದು ಹೇಳಬಯಸ್ಸೂತ್ತೇನೆ.
ಈ ಮಾತುಗಳು ಜನರ ಬಾಯಲ್ಲಿ ಹರಿದಾಡುತ್ತಿರುವಾಗ ಕೇಳಿಸಿಕೊಂಡಿದ್ದಾಗಿದೆ ಇಲ್ಲವೇ ಜನರ ಕಲ್ಪನೇಯೇ ಆಗಿರಬಹುದು ಎನ್ನುವುದು ನನ್ನ ಅಭಿಪ್ರಾಯವಾಗಿದೆ.