ಕಾರಣಾಂತರಗಳಿಂದ "ರಾಜ್ ಸೌಂಡ್ಸ್ & ಲೈಟ್ಸ್" ಚಲನಚಿತ್ರ ನೋಡಲು ತಡವಾಗಿತ್ತು.
ಆದರೆ ನಿನ್ನೆ ಚಲನಚಿತ್ರ ನೋಡಿ ಮುಗಿಸಿದ ಸಂತೋಷದ ಅನುಭವ ಹೇಳಲೇಬೇಕೆನಿಸಿತು.
ಹೆಸರಿಗೆ ತಕ್ಕಂತೆ ಕೆಲಸದ ಜವಾಬ್ದಾರಿಯೊಂದಿಗಿನ ಆರಂಭವಾದ ಕಥೆಯು ಹಳೆಯ ದಿನಗಳನ್ನು ಮೆಲುಕು ಹಾಕಿತ್ತು.ಶುಭ ಸಮಾರಂಭದ ಪೂರ್ವ ಸಿದ್ಧತೆ, ಹಿರಿಯರ ಜವಾಬ್ದಾರಿ, ಸಂಭ್ರಮದ ವಾತಾವರಣ, ನಾಯಕ ವಿನೀತ್ ತನ್ನ ಕೆಲಸದ ಒತ್ತಡದ ನಡುವೆ, ಪರೋಪಕಾರದ ಸೇವೆ ಕೊನೆಗೆ ಆತನಿಗೆ ಅದು ಮುಳುವಾಗೋ ಸನ್ನಿವೇಶ, ಚಿತ್ರಕ್ಕೆ ತಕ್ಕಂತೆ ಹಾಸ್ಯ, ಎಲ್ಲವೂ ಉತ್ತಮ ಕಥೆಯೊಂದಿಗೆ ಕೊನೆಗೊಂಡಿದೆ.
ಪ್ರತಿಯೊಂದು ಸನ್ನಿವೇಶವನ್ನು ನಿರ್ದೇಶಕರು ಸಂದರ್ಭಕ್ಕೆ ತಕ್ಕಂತೆ ಚೆನ್ನಾಗಿ ಪೋಣಿಸಿದ್ದಾರೆ.
ಪ್ರತಿಯೊಬ್ಬ ಹಿರಿಯ, ಕಿರಿಯ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.ಉತ್ತಮ ನಿರ್ದೇಶನ, ಛಾಯಾಗ್ರಹಣ , ಹಾಗೂ ಚಿತ್ರದ ಯಶಸ್ಸಿಗೆ ದುಡಿದ ತಂಡದ ಪರಿಶ್ರಮದೊಂದಿಗೆ ಚಿತ್ರವು ಬಹಳ ಉತ್ತಮವಾಗಿ ಮೂಡಿ ಬಂದಿದೆ.
ಏನೇ ಆಗಲಿ ಮತ್ತೊಂದು ತುಳು ಚಲನ ಚಿತ್ರ ಯಶಸ್ವಿಯಾಗಿದೆ ಎಂಬುದಕ್ಕೆ ಹೆಮ್ಮೆಯಿದೆ..
ಪ್ರತಿಯೊಬ್ಬ ಕಲಾವಿದರಿಗೆ ಧನ್ಯವಾದಗಳು.
ನಮ್ಮ ಕೋಸ್ಟಲ್ ವುಡ್ ನಲ್ಲಿ ಒಳ್ಳೊಳ್ಳೆಯ ಚಿತ್ರಗಳು ತೆರೆಗೆ ಬರಲಿ ಎಂದು ಹಾರೈಸುತ್ತೇನೆ.