"We might have seen but noticed not"
-Wordsworth
Popcorn Monkey Tiger
ಮನುಷ್ಯನ ಮೃಗೀಯ ಗುಣಗಳು ಎಂದೆಂದಿಗೂ ಗೌಪ್ಯ. ತೋರಿಕೆಯ ವಿಚಾರಗಳು ಒಂದಾದರೆ ಅಡಕವಾಗಿರುವ ಸಂಗತಿಗಳೇ ಹಲವಾರು. ಕಾಲ ಒದಗಿಸಿದಂತೆ ಚಹರೆಗಳು ತೆರೆದುಕೊಳ್ಳುತ್ತವೆ. ಅರಿವಿನ ಪರಿವಿಲ್ಲದೆ ಕೆಲವೊಮ್ಮೆ ಸಿಹಿ ಮತ್ತೊಮ್ಮೆ ಕಹಿ.
ಎಲ್ಲವನ್ನೂ ಸಾಮರಸ್ಯದಿಂದ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ! ಕನಸುಗಳ ಬೆನ್ನೇರಿದ ಕ್ಷಣ ಗುರಿ ನಿಗದಿಯಾಗುತ್ತದೆ. ಆದರೆ ಆಸೆ ಹೆಗಲೇರಿದರೆ ಬದುಕು ಕಷ್ಟ.
ನಾವು ಕಂಡು ಕೇಳಿದ ಸನ್ನಿವೇಶಗಳಿಗೆ ಸೂರಿ ಅಚ್ಚುಕಟ್ಟಾಗಿ ಬಣ್ಣ ತುಂಬಿದ್ದಾರೆ. ಪಾತ್ರಗಳು ಆಲೋಚನೆಗೆ ಹಚ್ಚುತ್ತವೆ. ಕಾಡುತ್ತವೆ.. ಬದುಕು ಅನಿರೀಕ್ಷಿತ ನಾಟಕ ಎಂಬುದನ್ನ ಖಾತರಿ ಪಡಿಸುವ ಕಥೆ.
ಉತ್ತಮ ನಟನೆ.. ಕ್ಯಾಮರಾ ಕೆಲಸ ಸೊಗಸಾಗಿದೆ.. ಕೊನೆ ಕ್ಷಣದವರೆಗೂ ಸೂರಿಯ ಚಿತ್ರಕತೆ ಪ್ರೇಕ್ಷಕರನ್ನ ಹಿಡಿದು ಕುಳ್ಳಿರಿಸುತ್ತದೆ. ನಟ ಧನಂಜಯ ಸಿಕ್ಕ ಅವಕಾಶದ ಸದುಪಯೋಗ ಪಡೆದುಕೊಂಡಿದ್ದಾರೆ.
ಸಂಗೀತ ಹಿಂದೊಮ್ಮೆ ಕೇಳಿದ ಹಾಗೆ ಎನಿಸಿದರೂ ಮುದಾಕೊಡುತ್ತದೆ. ಪಾತ್ರದ ಆಯ್ಕೆ ಹೇಳಿಮಾಡಿಸಿದ ಪರಿ ಎಲ್ಲವೂ ಚಿತ್ರಕ್ಕೆ ಪೂರಕವಾಗಿದೆ.
ಮತ್ತೊಮ್ಮೆ ಸೂರಿ ಸಿನೆಮಾ ನನ್ನಂತ ಸಾಹಿತ್ಯದ ವಿದ್ಯಾರ್ಥಿಯನ್ನು ಚಿಂತನೆಗೆ ಒಡ್ಡುವಂತೆ ಮಾಡಿದ್ದು ನಿಜ. ಶುಭವಾಗಲಿ.. ಕನ್ನಡ ಪ್ರೇಕ್ಷಕ ಚಿತ್ರಮಂದಿರಕ್ಕೆ ಹೋಗಿ ನೋಡಲಿ ಎಂದು ಕೇಳಿಕೊಳ್ಳುತ್ತೇನೆ.
4.5/5
ಅಭಿನಂದನ ಆರ್ ನಾಯ್ಕ್