ನಾನೊಬ್ಬ ಕನ್ನಡಿಗ ಆದ್ರೂ ಈ ಚಿತ್ರದ ಬಗ್ಗೆ ತುಂಬ ನೀರೀಕ್ಷೆ ಇತ್ತು! ಯಾಕಂದ್ರೆ ಕಲೆಗೆ ಭಾಷೆ ಇಲ್ಲ ನೋಡಿ! 1996 ರಲ್ಲಿ ತೆರೆಕಂಡ ಇದೆ ಶಂಕರ್ ನಿರ್ದೇಶನದ ಇಂಡಿಯನ್ ಚಿತ್ರ ಬಿಡುಗಡೆಗೊಂಡು ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿತ್ತು ನನ್ನ ತಂದೆ ಕಮಲ್ ಹಾಸನ್ ಅಭಿಮಾನಿಯಾಗಿದ್ದರು ಹಾಗಾಗಿ ಈ ಚಿತ್ರ (ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಮ್ಮ ಊರಿನ ಭಾರತ್ ಚಿತ್ರ ಮಂದಿರಕ್ಕೆ) ಬಂದ ಕೂಡಲೇ ನಮ್ಮನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿದ್ದರು ನಾನು ಅವಾಗ 3ನೇ ತರಗತಿ ಓದುತಿದ್ದ ಸಮಯ, ಚಿತ್ರ ನೋಡುವಾಗ ಭಾಷೆ ಅರ್ಥ ಆಗುತ್ತಿರಲಿಲ್ಲ ಆದ್ರೆ ಸ್ಕ್ರೀನ್ ನಲ್ಲಿ ಬರುತ್ತಿದ್ದ ಕಮಲ್ ಹಾಸನ್ ಪಾತ್ರಗಳು ಮಾತ್ರ ನನ್ನ ಮನಸೆಂಬ ಹೃದಯವನ್ನು ಈ ಚಿತ್ರ ಮುಟ್ಟಿತ್ತು! ಏ ಆರ್ ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದ ಹಾಡುಗಳು ಮಾತ್ರ ಅದ್ಭುತ ಎನಿಸಿತು, ಸಮಯ ಸಿಕ್ಕಾಗಲೆಲ್ಲ ಇದೆ ಚಿತ್ರದ ಹಾಡುಗಳನ್ನ ಮನೆಯ ಟೇಪ್ ರೆಕಾರ್ಡರ್ ನಲ್ಲಿ ಹಾಕಿ ಹಾಕಿ ಕೇಳುತ್ತಿದ್ದೆ ... ಹಲವಾರು ವರ್ಷಗಳ ನಂತರ ಮತ್ತೆ indian 2 ಚಿತ್ರ ಬರುತ್ತಿದೆ ಅಂದಾಗ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿತ್ತು ಆದರೆ ಈ ನೀರೀಕ್ಷೆಯೆಲ್ಲ ಸಿನಿಮಾ ಥಿಯೇಟರ್ನಲ್ಲಿ ಚಿತ್ರ ನೋಡುತ್ತಿದಾಗ್ಲೆ ಹುಸಿಯಾಯಿತು ನಿರ್ದೇಶಕ ಶಂಕರ್ ಇಷ್ಟು ಕೆಟ್ಟದಾಗಿ ಸಿನಿಮಾ ಮಾಡಿದ್ದು ನಾನು ನೋಡಿದ್ದು ಇದೇ ಮೊದಲ ಸಲ, ನಿಜವಾಗ್ಲೂ ಈ ಸಿನೆಮಾ ಥಿಯೇಟರ್ ನಲ್ಲಿ ನೋಡಿ ಟೈಮ್ ವೆಸ್ಟ್ ಮಾಡೋ ಬದಲು ನಾನು ಅದೇ ಓಲ್ಡ್ ಇಂಡಿಯನ್ ಸಿನೆಮಾ ಮೊಬೈಲ್ ನಲ್ಲಿ ನೋಡುತ್ತಿದ್ದೆ ಅಂತ ಅನಿಸಿತು