ಮರಗಳ,ಕಾಡಿನ ರಕ್ಷಣೆಯ ಬಗ್ಗೆ ಮೂಡಿರುವ ಸುಂದರವಾದ ಸಿನೆಮಾ. ಸಂಚಾರಿ ವಿಜಯ್ ಅವ್ರು, ಒಬ್ಬ ನಟ ಹೀಗೂ ನಟನೆ ಮಾಡಬಹುದು ಎಂದು ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ. ಭೂಮಿಯ ಮೇಲಿನ ನಿಜ ದೇವರು ತಾಯಿ ಹಾಗೂ ಮಗನ ಪ್ರೀತಿ ಕಣ್ಣಲ್ಲಿ ನೀರು ತುಂಬಿಕೊಳ್ಳುವಂತೆ ಮಾಡುತ್ತದೆ. ಸೋಲಿಗರ ಹಾಡುಗಳು ಹಾಗೂ ಅವರ ಸಂಸ್ಕೃತಿ, ನಮ್ಮನ್ನು ಸಿನಿಮಾ ಪೂರ್ತಿ ಹಿಡಿದಿಟ್ಟುಕೊಳ್ಳುತ್ತದೆ.