ದಿಯಾ ಚಿತ್ರ ತಂಡದವರ ಹತ್ತಿರ ಮೊದಲನೇಯದಾಗಿ ಕ್ಷಮೆ ಕೇಳಬೇಕು... ಯಾಕೆಂದರೆ ಇಂತಹ ಚಿತ್ರವನ್ನು ಥಿಯೇಟರಿನಲ್ಲಿ ನೋಡಲು ಆಗಲಿಲ್ಲ ಎಂಬ ಬೇಸರವಿದೆ... ಇದು ನನ್ನ ಒಬ್ಬನ ವಿಷಯವಲ್ಲ. ಎಷ್ಟೋ ಜನ ಮೊಬೈಲ್ ನಲ್ಲಿ ವೀಕ್ಷಿಸಿದ ನಂತರ ಅವರಿಗೆ ಖಂಡಿತ ಮನಸ್ಸಿಗೆ ಬೇಸರ ಆಗಿಯೇ ಇರುತ್ತದೆ... ಇನ್ನು ಚಿತ್ರದ ಬಗ್ಗೆ ಹೇಳಬೇಕೆಂದರೆ ಕಥೆ ನಟನೆ ತುಂಬಾ ಚೆನ್ನಾಗಿ ಮಾಡಿದ್ದಾರೆ ಯಾವುದೇ ಹಾಡುಗಳು ಇರದೇ ಇದ್ದರು ಇಷ್ಟ ಆಗುವ ಹಿನ್ನೆಲೆ ಸಂಗೀತ ಸಂಭಾಷಣೆ ಎಲ್ಲವೂ ಪ್ರೇಕ್ಷಕರ ಮನ ಹಿಡಿದಿಟ್ಟುಕೊಳ್ಳುತ್ತದೆ... ಕ್ಲೈಮಾಕ್ಸ ಬೇಸರ ತಂದ್ದರು ಈ ಚಿತ್ರ ನಮ್ಮನ್ನು ತುಂಬಾ ಸಮಯ ಕಾಡುವುದಕ್ಕೆ ಆ ಕ್ಲೈಮಾಕ್ಸೆ ಕಾರಣವಾಗಿ ಬಿಡುತ್ತದೆ... ಕಥೆಯನ್ನು ವಿವರಿಸಲು ಸಾಧ್ಯವಿಲ್ಲ ಅದನ್ನು ನೋಡಿಯೇ ಕಣ್ತುಂಬಿಕೊಳ್ಳಬೇಕು... ಮತ್ತೊಮ್ಮೆ ಕ್ಷಮಿಸು ದಿಯಾ..