ಅಭಿನಂದನೆಗಳು 💐 #ಒಂದಲ್ಲಾಎರಡಲ್ಲಾ,ಒಂದು ಹಸು ಮತ್ತು ಒಂದು ಹುಡುಗನನ್ನು ಕಥೆಯ ಕೇಂದ್ರವಾಗಿಟ್ಕೊಂಡು "ಸೂತ್ರದಾರ" ಡಿ ಸತ್ಯ ಪ್ರಕಾಶ್ ರ ಕುತೂಹಲಕಾರಿ ಮತ್ತೆ ಸೊಗಸಾದ ಹಾಸ್ಯಮಿಶ್ರಿತ ನಿರೂಪಣಾ ಶೈಲಿಗೆ ಒಂದು ಸಲಾಂ🙏, ಕನ್ನಡದ ಬಳಕೆ, ನಮ್ ನೆಲದ ಸೊಗಡೇ ಮಾಯವಾಗ್ತಾ ಇರೊ ಈ ಕಾಲ್ದಲ್ಲಿ ಈ ಸಿನಿಮಾ ಅವೆಲ್ಲವನ್ನೂ ತನ್ನೊಡಲಲ್ಲಿ ಇಟ್ಕೊಂಡಿದೆ, ಅದು ಸಂಭಾಷಣೆ ಮತ್ತು ಪಾತ್ರಗಳ ಜೀವನಶೈಲಿ ಇಂದ ತಿಳಿತದೆ. ಧನ್ಯವಾದ "ಸೂತ್ರದಾರ"ರೇ🙂ಚಂದದ ಸಿನಿಮಾಕ್ಕೆ. ಇನ್ನು ಪಾತ್ರಧಾರಿಗಳು ಸಹ ತುಂಬ ಗಮನ ಸೆಳಿತಾರೆ(ಹುಲಿ,ಡೇವಿಡ್,ಸುರೇಶ್ ಆಗಿ ಭೂಷಣ್, ರಾಜಣ್ಣ, ಸಮೀರ, ಕಾನ್ಸ್ಟೆಬಲ್,ಲಕ್ಷ್ಮಿ) ಸಂಭಂದಗಳ ಮಹತ್ವದ ಬಗ್ಗೆ ಬಂದಾಗ ಕಣ್ಣಂಚಲ್ಲಿ ತುಸು ತೇವ,ಇದಕ್ಕೆ ಬಹು ಮುಖ್ಯ ಕಾರಣ ವಾಸುಕಿ ವೈಭವ್, ನಿಜವಾಗ್ಲು ಸಂಗೀತ "ವೈಭವ"ವಾಗಿದೆ, ಲೊಕೇಶನ್ಸ್ ಸೂಪರ್, ಒಟ್ಟಾರೆ ಇದೊಂದು "ಅಪ್ಪಟ ನಮ್ಮ ನೆಲದ ಸಿನಿಮಾ" ಎಲ್ಲಾ ವಿಭಾಗದಿಂದಲೂ,,,,!!!!
ಇನ್ನೂ ಹೇಳ್ಬೇಕಾಗಿರೋದು "ಒಂದಲ್ಲಾ ಎರಡಲ್ಲಾ"😃
ಇನ್ನು ಸಿನಿಮಾ ಎಲ್ಲಾ ಕಡೆ ಹೋಗ್ಲಿ ಎಲ್ರೂ ಸಿನಿಮಾ ನೋಡಿ ಮೆಚ್ಚುವಂತಾಗ್ಲಿ.
ಶುಭವಾಗ್ಲಿ........🙏