ಒಂದು ಕಗ್ಗಾಡಿನಲ್ಲಿ ನಡೆಯುವ ಸ್ವಾಭಾವಿಕ ಘಟನೆ, "ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!?" ಎಂಬ ವಾಕ್ಯದಿಂದ ಕಾದಂಬರಿಯು ಕೊನೆಗೊಳ್ಳುತ್ತದೆ.
ನಾನು ಓದಿ, ಮನಸಾರೆ ಮೆಚ್ಚಿ, ಖುಷಿ ಪಟ್ಟ ಪುಸ್ತಕಗಳಲ್ಲಿ 'ಕರ್ವಾಲೋ' 📖 ಒಂದು. ಭಾವನೆಗಳನ್ನು ವ್ಯಕ್ತಪಡಿಸುವ ರೀತಿ, ಸ್ಥಿತಿಯನ್ನು ವಿವರಿಸುವ ರೀತಿ ಅತೀ ಸುಂದರ. ಸರಳತೆಯ ವಿವರಣೆಯು ವರ್ಣನಾತೀತ. ಪುಸ್ತಕದ ಮೊದಲ ಪುಟದಿಂದ ಕೊನೆಯವರೆಗೂ ಕುತೂಹಲದ ಗುಚ್ಛಗಳು ನನ್ನನ್ನು ಆವರಿಸಿತ್ತು. ಪೂರ್ಣ ಚಂದ್ರ ತೇಜಸ್ವಿ ರವರ ರಚನೆಯ ಶೈಲಿಗೆ ನಾನು ಮನ ಸೋತಿದ್ದೇನೆ... ವಿಜ್ಞಾನದ ಸಾಕ್ಷಾತ್ಕಾರವೂ ಕೂಡ ವ್ಯಕ್ತಿಯ ವಿಕಸನಕ್ಕೆ ಮುಖ್ಯವಾದುದು ಎಂಬುದು ಇಲ್ಲಿ ಗಮನಾರ್ಹ. ನಿಜಕ್ಕೂ ಕರ್ವಾಲೋ ಪುಸ್ತಕ ಒಂದು ಅದ್ಭುತವೇ ಸರಿ. #Loved_it 📖♥️