ಚಲನಚಿತ್ರಕ್ಕಿಂತ ಕಿರು ಚಿತ್ರಮಾಡಿದ್ರೆ
ಚನ್ನಾಗಿರ್ತಿತ್ತು.......👇🏻👇🏻👇🏻👇🏻👇🏻
🎭ಕೇಳಿದ್ದೆ ನಾ ತುಸು ಸಮಯ
ಅಷ್ಟರಲ್ಲಾಯಿತು ಅವಳ ವಿವಾಹ
ಕ್ರೌರ್ಯದಿ ಕ್ಷೌರದ ಕತ್ತಿ ಹಿಡಿದ ಕೈ ಹಿಂದಿತ್ತು
ನನ್ನ ಸತ್ತ ಪ್ರೀತಿಗೆ ಒತ್ತೆಯಿಟ್ಟಿದ್ದ ಹೃದಯ!
🎭ಒಂಟಿ 'ಅರಣ್ಯ'ರೋಧನೆಯದು
ಅರಗಿಣಿಯು ಹದ್ದಿನ ಕೈ ಸೇರಿ
ಕೋಪದ ಕೂಪದಿ ಕೋವಿಯ ಕಾವಲಲಿ
ಅದಾಗಲೆ ನೊಂದು ಬೆಂದು ಸತ್ತಿದ್ದಳವಳು!
🎭ಮೃತ್ಯು ಕೂಪದಿಂದಾಚೆ ಹೋಗಲು
ಧೈರ್ಯ ಮಾಡುವ ಮೂರ್ಖತನವಿರಲಿಲ್ಲ
ವೈನಿನ ನಶೆಯ ಹೊಡೆದಾಟದಲಿ ಹಲಸು
ಬಿರಿಯಾನಿ ಮತ್ತು ಪ್ರೀತಿ ಜಯಿಸಿದವು!!
❤️"ಪ್ರೀತಿ ಮತ್ತು ವೈನ್🍷 ಹಳೇದಾದಷ್ಟು
ನಶೆಯ ಹುಚ್ಚು ಜಾಸ್ತಿ, ಬೆಲೆ ಸಹ ಹೆಚ್ಚು ".
_amardhu✒️