ಈ ಚಿತ್ರವು ಯಾವುದೇ ಆಡಂಬರವಿಲ್ಲದ ಕಥೆಗೆ ಒತ್ತು ಕೊಟ್ಟು ಮಾಡಿದ ಚಿತ್ರ. ಮೈ ಆಟೋಗ್ರಾಫ್ ಮತ್ತು ಮಾಲ್ಗುಡಿ ಡೇಸ್ ಹೇಗೆ ನಮ್ಮ ಜೀವನದಲ್ಲಿ ನಡೆದ ನೈಜತೆ ಕಥೆಗಳಿಗೆ ಹತ್ತಿರವಾಗಿತ್ತು. ಹಾಗೆಯೇ ಈ ಚಿತ್ರವು ಮೂಡಿ ಬಂದಿದೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚಿತ್ರದ ಜೀವಾಳ. ಜೊತೆಗೆ ನೈಜತೆಗೆ ಒಟ್ಟು ಕೊಟ್ಟಂತೆ ಪಾತ್ರದಾರಿಗಳು ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಎಲ್ಲಾ ಪಾತ್ರಗಳು ಚಿತ್ರಕ್ಕೆ ಜೀವ ತುಂಬಿದ್ದಾರೆ. ಧನಂಜಯ್ ಎಲ್ಲಾ ತರದ ಪಾತ್ರಕ್ಕೂ ನ್ಯಾಯ ಒದಗಿಸುತ್ತಾರೆ. ಉಮಾಶ್ರೀ ಮತ್ತು ಶೃತಿ ಬಗ್ಗೆ ಹೇಳೋಕ್ಕೆ ಹೋದರೆ ಇಲ್ಲಿ ಕಡಿಮೆ ಆಗಬಹುದು. ಅವರು ನೈಜ ಜೀವನದಲ್ಲಿ ಪಟ್ಟ ಕಷ್ಟ ಇಲ್ಲಿ ಕಾಣುವ ಹಾಗೆ ಪಾತ್ರ ಮಾಡಿದ್ದಾರೆ. ರವಿಶಂಕರ್, ಅಚ್ಯುತ್ ಕುಮಾರ್, ಜಹಾಂಗೀರ್ ರವರ ಹಾಸ್ಯ ಮಿಶ್ರಿತ ಪಾತ್ರಗಳು ಚೆನ್ನಾಗಿವೆ. ಅನು ಪ್ರಭಾಕರ್ ಕೂಡ ಅಭಿನಯದಲ್ಲಿ ತಾವೇನು ಕಡಿಮೆ ಇಲ್ಲ ಅನ್ನೋ ತರ ಅಭಿನಯ ನೀಡಿದ್ದಾರೆ. ಕೊನೆಯದಾಗಿ ಪ್ರಮೋದ್ ಬಗ್ಗೆ ಹೇಳಲೇ ಬೇಕು. ಅವರು ಈ ಚಿತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಅನ್ನಿಸುತ್ತೆ. ಒಂದೇ ಚಿತ್ರದಲ್ಲಿ ಸಿಕ್ಸರ್ ಬಾರಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ ಹೇಳಬೇಕೆಂದರೆ ಹುಟ್ಟಿಸಿದ ತಂದೆ ತಾಯಿಗಳನ್ನು ಮರೆಯುವ ಮಕ್ಕಳು ಈ ಚಿತ್ರವನ್ನು ಒಂದು ಸಲವಾದರೂ ನೋಡಬೇಕು. ಮನಸಿಗೆ ತುಂಬಾ ಕಾಡುತ್ತೆ ಹಾಗೂ ಕನ್ನಡದಲ್ಲಿ ಸ್ವಮೇಕ್ ಇಲ್ಲ ಅನ್ನುವರಿಗೆ ಇದೊಂದು ಸ್ಯಾಂಪಲ್. ರೋಹಿತ್ ಪದಕಿ ಅವರಿಗೆ ಧನ್ಯವಾದಗಳು. ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಿ.