*ಹುಚ್ಚ 2*.. ನಾಕಂಡ ಒಂದೊಳ್ಳೆ ಕನ್ನಡ ಚಲನಚಿತ್ರ.. ಚಿತ್ರದ ದ ಬಗ್ಗೆ ಏನೇನೋ ಹೇಳ್ನೇಕು ಅಂತ ಬರೆಯೋಕೆ ಶುರು ಮಾಡಿದೆ.. ಆದ್ರೆ ನಾನೀಗ ಅದನ್ನ ವಿಷ್ಲೇಷಣೆ ಮಾಡೋಕೆ ಹೊರಟ್ರೆ ನೋಡುಗರ ಕಾತುರ ಆತುರ ಅಲ್ಲೇ ಬ್ರೇಕ್ ಹೊಡೆದಂಗೆ ಆಗುತ್ತೆ..
ಯಾಕಂದ್ರೆ ಹುಚ್ಚ2 ಸಿನೇಮಾನ ನೀವೆಲ್ಲಾ ನೋಡ್ಲೆ ಬೇಕು.. ಆ ಥ್ರಿಲ್ಲಿಂಗ್ ಆ ಫ಼ೀಲಿಂಗ್ ಆ ಎಂಜಾಯ್ನ ಅನುಭವಿಸ್ಲೇ ಬೇಕು..
ಉತ್ತಮ ನಿರ್ದೇಶನ.ಛಾಯಾಗ್ರಹಣ. ಸಂಗೀತ.. ಹಾಡು.. ಅಭಿನಯ ಕೂಡಾ..
ಇಷ್ಟಕ್ಕೂ ಇನ್ನೊಂದು ವಿಶೇಷತೆ ಏನಪ್ಪ ಅಂದ್ರೆ ಸಿನಿಮಾದಲ್ಲಿ ನಮ್ಮ ಮಂಗಳೂರಿನ ಹುಡುಗ ಅಶ್ವಿನ್ ಅಲಿಯಾಸ್ ಸ್ವರಾಜ್ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ..( ಪಾತ್ರನೂ ಏನೂಂತ ಬೇಡ suspence ಹೊರಟು ಹೋಗುತ್ತೆ) ಆದ್ರೆ ಇಡೀ ಕತೆಯ ಸೂತ್ರದಾರ ಇವರೇ.. ತನ್ನ ಪಾತ್ರಕ್ಕೆ ಎಲ್ಲೂ ಚ್ಯುತಿ ಬರದ ರೀತೀಲಿ ಮನೋಜ್ಞ ವಾಗಿ ಉತ್ತಮವಾಗಿ ಅಭಿನಯ ಚತುರತೆ ತೋರಿದ್ದಾರೆ..
ಮತ್ತೊಮ್ಮೆ ನಮ್ಮ ಮಂಗಳೂರಿನ ಕೀರ್ತಿಯನ್ನ ಹೆಚ್ಚಿಸಿದ್ದಾರೆ..
ಇದು ಹೊಗಳಿಕೆ ಅಥವಾ ಪ್ರಚಾರಕ್ಕೊಸ್ಕರ ಹೇಳೊ ಮಾತಲ್ಲ..
ಪ್ರತಿಯೊಬ್ಬ ಪ್ರೇಕ್ಷಕರ ಬಾಯಿಂದ ಬಂದಂತ ಪ್ರಶಂಸೆಯ ನುಡಿಗಳು..
ಒಂದು ಉತ್ತಮ ಸಿನೇಮಾನ ಮಿಸ್ಸ್ ಮಾಡ್ಕೊಬೇಡಿ..
ಕುಟುಂಬ ಸಮೇತರಾಗಿ ನೋಡೊವಂತ.. ಅಶ್ಲೀಲ ಪದ ಮತ್ತು ದೃಶ್ಯಗಳಲ್ಲಿಲ್ಲದ ಉತ್ತಮ ಚಿತ್ರ..