ಅಬ್ಬಾ ಮಿಥುನ್ ಚಕ್ರವರ್ತಿಯಿಂದ ಖೈದಿ ತಪ್ಪಿಸಿಕೊಂಡು ಹುಡುಗಿಯಿಂದ ಪೊಲೀಸ್ರಿಗೆ ಶರಣಾದ್ರೆ ಖುಷಿಪಡುವ ಬಕ್ವಾಸ್ ಪೊಲೀಸ್ ಕ್ಯಾರೆಕ್ಟರ್. ಚೂರು ವಿಶೇಷತೆ ವಾಸ್ತವತೆ ಇಲ್ಲದ ಪ್ರೇಮ್ ಎಂಬ ಹೆಸರಿನ ನಿರ್ದೇಶಕನಿಗೆ ಗೊತ್ತಿರುವುದು ಒಂದೇ ಯಶಸ್ಸಿನ ಉತುಂಗದಲ್ಲಿರುವ ಇಬ್ಬರು ನಾಯಕ ನಟರನ್ನು ವಿಧೂಷಕರಂತೆ ಬಳಸಿಕೊಂಡು ಖಳನಾಯಕ ಎಂದು ನಾಮಕರಣ ಮಾಡಿದ್ದಷ್ಟೇ,ಬರೋಬ್ಬರಿ 3 ತಾಸು ಸಿನಿಮಾ ಇಲ್ಲಿಯ ನೆಲಕ್ಕೆ ಕಿಮ್ಮತ್ತಿಲ್ಲ. ಪರಭಾಷ ನಟಿಯ ತೋರಿಸಿದ್ದು,ಪರದೇಶ ಸುತ್ತಿಸಿದ್ದು,ಶ್ರೀಕಾಂತರನ್ನು ಕುರೂಪಗೊಳಿಸಿದ್ದು,ಮಿಥುನ್ ಮಂಗವಾಗಿದ್ದು, ಶಿವಣ್ಣ ಮತ್ತು ಸುದೀಪ್ ತಮ್ಮದ್ದಲ್ಲದ ಹಾವಭಾವ ಪ್ರದರ್ಶಿಸಿ ಡಾನ್ ಎಂಬ ಹೆಸರಿಗೆ ಕಮೇಡಿಯನ್ ಎಂಬ ಹಣೆಪಟ್ಟಿ ಕಟ್ಟುವಂತಾದದ್ದು,ನಿರ್ಮಾಪಕರನ್ನು ತನ್ನ ಮಾರುಕಟ್ಟೆ ಬಂಡಲ್ ಚತುರತೆಯಿಂದ ಆಕರ್ಷಿಸಿ ಸೋಲುವ ಸುಳಿವು ಸಿಕ್ಕ ರಿಲೀಸ್ಗೂ ಎರಡು ದಿನ ಮುಂಚೆ ಟಿಕೆಟ್ ದರ ಏರಿಸಿದ್ದು ಮತ್ತು ದುಬಾರಿ ಕಾಸು ತೆತ್ತ ಪ್ರೇಕ್ಷಕ ತಲೆನೋವು ಉಡುಗೊರೆಯಾಗಿ ಪಡೆದ ಕಥೆಯೇ ದಿ ವಿಲನ್..... ರಾಮ or ರಾವಣ ಅಂತೇ ಮಕಕ್ಕೆ ಪದಗಳ ಅರ್ಥ ತಿಳಿಯದ ಕತೆಗಾರ ಪುಣ್ಯಾತ್ಮ.
ಅರ್ಜುನ್ ಜನ್ಯರವರಿಗೆ ನಿಜವಾಗ್ಲೂ ಹುಚ್ಚು ಹಿಡಿದಿರುತ್ತೆ ಈ ಸಿನಿಮಾ ಹಿನ್ನೆಲೆ ಸಂಗೀತ ನೀಡ್ಬೇಕಾದ್ರೆ ಅವರ ಅಸಲಿ ಸಂಗೀತವೇ ಮಾಯ ಎಲ್ಲಾ ಪ್ರೇಮಮಯ ಪ್ರೇಮ್ಗಾಗಿ ಮತ್ತು ಪ್ರೇಮ್ಗೋಸ್ಕರ.....
ನನ್ನ ಸುಂದರ ಸಂಜೆಯ ಕೆಟ್ಟ ಅನುಭವ ದಿ ವಿಲನ್...