ಸಂದೇಶದ ಜೊತೆಗೆ ರಂಜಿಸುವ ಯುವ'ರಾಜ(ರತ್ನ)':
ನಾಯಕ ಪುನೀತ್ ರಾಜಕುಮಾರ್ ಅವರ ಅಭಿನಯ, ಸಾಹಸ, ನೃತ್ಯ ಎಂದಿನಂತೆ ಅಧ್ಬುತ. ಜೊತೆಗೆ ಈ ಹಿಂದಿನ ಅವರ ಚಿತ್ರಗಳಿಗಿಂತ ಹೆಚ್ಚು ಒನ್ ಲೈನ್ರ್ಸ್, ಪಂಚ್ ಡೈಲಾಗ್ ಇವೆ. ಅವರ ಈ ಹಿಂದಿನ ಕೆಲ ಚಿತ್ರಗಳಲ್ಲಿ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ಭಾರವನ್ನು ನಿರ್ದೇಶಕ ಸಂತೋಷ್ ಬಹುಪಾಲು ಇಳಿಸಿದ್ದಾರೆ. ಇನ್ನು ಚಿತ್ರದ ಮತ್ತೊಬ್ಬ ನಾಯಕ ಪ್ರಕಾಶ್ ರೈ ಎಂದರೆ ತಪ್ಪಾಗಲಾರದು, ಅಭಿನಯ ಮನಸ್ಸಿನಲ್ಲಿ ಉಳಿಯುತ್ತದೆ. ನಾಯಕಿ ಸಾಯೇಶ ಹಾಡುಗಳಲ್ಲಿ ಮುದ್ದಾಗಿ ಕಾಣುತ್ತಾರೆ. ಉಳಿದಂತೆ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಸಣ್ಣ ಪಾತ್ರಕ್ಕೂ ಜನಪ್ರಿಯ ಕಲಾವಿದರನ್ನು ಬಳಸಿಕೊಂಡಿರುವುದು ನಿರ್ದೇಶಕರ ಜಾಣ್ಮೆ.
ತಾಂತ್ರಿಕವಾಗಿ ಚಿತ್ರ ಗೆಲ್ಲುತ್ತದೆ. ಸಂತೋಷರ ಬಿರುಸಿನ ಚಿತ್ರಕಥೆ, ಜ್ಞಾನೇಶ್ ಅವರ ಬಿಗುವಿನ ಸಂಕಲನ ನೋಡುಗರನ್ನು ಹಿಡಿದಿಟ್ಟು ಕೊಳ್ಳುತ್ತದೆ. ವೆಂಕಟೇಶ್ ಅಂಗರಾಜು ಛಾಯಾಗ್ರಹಣ ಕಲೆ ಪ್ರತಿಯೊಂದು ಫ್ರೇಮ್ ಅಲ್ಲೂ ಎದ್ದು ಕಾಣುತ್ತದೆ. ಸಂತೋಷ್ ಅವರ ಸಂಭಾಷಣೆ ಅರ್ಥಪೂರ್ಣ ಮತ್ತು ಚಪ್ಪಾಳೆ ಗಿಟ್ಟಿಸುತ್ತೆ. ಚಿತ್ರದ ಹಾಡುಗಳಲ್ಲಿ ನೀನಾದೆನ, ಪವರ್ ಆಫ್ ಯೂತ್ ಗುನುಗುವಂತೆ ಮಾಡುತ್ತೆ. ಪಾಠ ಶಾಲಾ ಹಾಡು ಚಿತ್ರದ ಜೀವಾಳ, ಅದರಲ್ಲಿನ ಸಾಹಿತ್ಯ ಇಡೀ ಚಿತ್ರದ ಸಾರಾಂಶ. ತಮನ್ ರ ಹಿನ್ನೆಲೆ ಸಂಗೀತ ದೃಶ್ಯ ಗಳಲ್ಲಿನ ಭಾವ ತೀವ್ರತೆ ಹೆಚ್ಚಿಸುತ್ತದೆ. ಹೊಂಬಾಳೆ ಸಂಸ್ಥೆಯ ನಿರ್ಮಾಣ ಚಿತ್ರದ ದೊಡ್ಡ ಶಕ್ತಿ,ಚಿತ್ರದ ಮೊದಲಾರ್ಧ ವನ್ನು ತಾಳ್ಮೆಯಿಂದ ನೋಡಿ ತೂಗಿಸಿದರೆ ದ್ವಿತೀಯಾರ್ಧ ಭರಪೂರ ಮನರಂಜನೆ ಖಂಡಿತ.ಬಹುದಿನಗಳ ವರೆಗೆ ಚಿತ್ರಮಂದಿರ ಹಾಗೂ ಜನರ ಮನಸ್ಸಿನಲ್ಲಿ ಉಳಿಯುವ ಒಂದೊಳ್ಳೆ ಕೌಟುಂಬಿಕ ಸಾಮಾಜಿಕ ಚಿತ್ರ ಯುವರತ್ನ. ಪುನೀತ್ ರ ಸಿನಿ ಪಯಣದಲ್ಲಿ ಮತ್ತೊಂದು ಗರಿ ಹಾಗೂ ಕನ್ನಡ ಚಿತ್ರರಂಗದ ಮಗದೊಂದು ಮೈಲಿಗಲ್ಲು
⭐⭐⭐⭐⭐