ಕಥೆಗಾರನೊಬ್ಬ ತನ್ನ ಕಲ್ಪನೆಯನ್ನು ನೈಜ ಬದುಕಿನೊಂದಿಗೆ ತಳುಕು ಹಾಕಿ ಶಬ್ದದೊಂದಿಗೆ ಪೋಣಿಸಿ ಸುಂದರ ಮಾಲೆಯನ್ನಾಗಿಸುವುದೆ #ಸಿನೆಮಾ.
ಕಲ್ಪನೆಗಳು,ಚಿತ್ರತಂಡದ ಪರಿಶ್ರಮದಿಂದ ಒಂದು ಸುಂದರ ಕಥೆಗೆ ಜೀವಂತಿಕೆ ಸಿಗುತ್ತದೆ.
ಸಿನೆಮಾ ನೋಡುವರಲ್ಲಿಯು thriller,comedy, romantic, horror, action ಹೀಗೆ ವಿಭಿನ್ನ ಅಭಿರುಚಿ ಹೊಂದಿದವರು ಇದ್ದಾರೆ.ನೋಡುವವನ ಮನ ಮುಟ್ಟುವಂತೆ ಸಿನೆಮಾವನ್ನು ಪ್ರಸ್ತುಪಡಿಸುವುದು ಕೂಡ ಒಂದು ಕಲೆ,ಸಾಹಸವೇ ಸರಿ.
ಈಗಷ್ಟೆ ಒಂದು ಸಿನೆಮಾ ನೋಡಿದೆ, ಅದನ್ನ ನೋಡಿದ ಮೇಲೆ ನಿಮ್ಮಜೊತೆ ಹಂಚಿಕೊಳ್ಳುವ ಅಂತ ಅನಿಸ್ತು..
#ಮೈ_ನೇಮ್_ಈಸ್_ಅಣ್ಣಪ್ಪ
ಬಿಡುಗಡೆ ಆದ ಸಂದರ್ಭದಲ್ಲಿ ನೋಡ್ಲಿಕ್ಕೆ ಸಾಧ್ಯ ಆಗದ ಕಾರಣ ಈಗ ನೋಡಿದೆ,ನಂಗೆ ತುಂಬಾ ಇಷ್ಟ ಆದ ಸಿನೆಮಾ.
ನಮ್ಮ ತುಳು ಇಂಡಸ್ಟ್ರಿಯಲ್ಲಿ ಯು ಇಷ್ಟೊಳ್ಳೆ ಸಿನೆಮಾ ಮಾಡಬಹುದು ಅಂತ ತೋರಿಸಿಕೊಟ್ಟ ಸಿನೆಮಾ.
ಮಯೂರ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನೆಮಾ ಪ್ರತಿಯೊಂದು ದೃಶ್ಯದಲ್ಲೂ, ಸಂಬಂಧಗಳ #connection ಅನ್ನು ಅತ್ಯಂತ ಅದ್ಬುತವಾಗಿ ತೋರಿಸಿಕೊಟ್ಟಿದ್ದಾರೆ.
ಥ್ರಿಲ್ಲಿಂಗ್ ನ ಜೊತೆಜೊತೆಗೆ ವಿಭಿನ್ನ ರೀತಿಯ ಕಾಮೆಡಿ ಸೀನ್, ಕ್ಯೂಟ್ ಲವ್ ಸ್ಟೋರಿ, ಫ್ಯಾಮಿಲಿ ಸೆಂಟಿಮೆಂಟ್, ಲಿರಿಕ್ಸ್
ನಾಯಕನ ಅದ್ಬುತ ನಟನೆ ಎಲ್ಲವೂ ಒಟ್ಟು ಸೇರಿ ಒಂದು ಅದ್ಬುತ ಸಿನೆಮಾ.
ಯಾವುದೇ ಸಿನಿಮಾವನ್ನು ಬರೀ ಮನೋರಂಜನೆ ಗೆ ನೋಡುವ ಬದಲು,ಅದರಲ್ಲಿರುವ ಕಥೆ, ಶ್ರಮ, ಪ್ರತಿಯೊಂದು ದೃಶ್ಯವನ್ನು ಕನೆಕ್ಟ್ ಮಾಡಿದ ರೀತಿ ಎಲ್ಲವನ್ನೂ ಹತ್ತಿರದಿಂದ ಗಮನಿಸಿ,
ಮೇಲೆ ಮೇಲೆ ನೋಡಿ "ಉಂದು ಎಂಚಿನ ಫಿಲ್ಮ್ ಮಾರಾಯ" ಅಂತ ಹೇಳೋ ಮೊದಲು,
ಸಿನೆಮಾ ದ ಒಳಹೊಕ್ಕು ಒಮ್ಮೆ ನೋಡಿ ಖಂಡಿತ ವಾಗಿಯು #ಮೈ_ನೇಮ್_ಈಸ್_ಅಣ್ಣಪ್ಪ ನಿಮ್ಮ ಮನಸು ಗೆಲ್ಲೇ ಗೆಲ್ಲುತ್ತೆ...
ತುಳು ಸಿನೆಮಾ ಗಳು ಈಗ #talkies app ನಲ್ಲಿ ಲಭ್ಯ...
#ಒಮ್ಮೆನೋಡಿ
#ಮೈ_ನೇಮ್_ಈಸ್_ಅಣ್ಣಪ್ಪ