ಮನೆದೇವ್ರು ಕನ್ನಡ ಸಿನಿಮಾ
ಮನೆದೇವ್ರು
ಕನ್ನಡ ಸಿನಿಮಾ ರಂಗದಲ್ಲಿಯೇ ಸದಾ ನವ್ಯತೆ
ಸರಳ ಸುಂದರವಾಗಿ ಬಿತ್ತರಿಸಿದೆ ಮನೆಮನೆ ಕತೆ
ನೋಡುತ್ತಲಿದ್ದರೆ ಇಂದಿಗೂ ಕೂಡ ಜೀವಂತ
ಮನ ಕಲಕುವ ಎಲ್ಲಾ ಕಾಲಕ್ಕೂ ಹೊಸದಿಗಂತ
ನವಿರು ಕತೆಯ ಹಾಸ್ಯದ ರೂಪದಲ್ಲಿ ಎಳೆದು
ತುಂಟತನದಿಂದ ನಗಿಸಿ ನಲಿಸಿ ನಮ್ಮಗಳನು
ತುಂಬು ಕುಟುಂಬದಿಂದ ಬಂದವರು ಖುಷಿ
ಮತ್ತೊಮ್ಮೆ ನೋಡುವ ನಾನೋರ್ವ ಪ್ರೇಮಸಂತ
ರವಿಯ ಕಿರಣಗಳು ಹೊಳೆವ ಚಿತ್ರಣ ಸುಂದರ
ರಸಿಕತೆ ತುಂಬಿದ ರೋಮಾಂಚನ ರಸಾಯನ ಅಸ್ತ್ರ
ಮನೆಸೆಳೆದು ಬರಸೆಳೆದು ಕರೆದೊಯ್ಯುವ ಕಲಾದರ್ಶನ
ಜುಮ್ಮೆನಿಸುವ ಸಿಹಿಮುತ್ತುಗಳ ತೋರಣದ ಶಾಸ್ತ್ರ
ಅಮೃತಶಿಲೆಯ ಭವ್ಯ ಭಂಗಿಯ ಸುಧಾ ರೂಪಿಣಿ
ಹೊಸ ಕಳೆಯನ್ನು ಹೊತ್ತ ಮಿಂಚಿನ ಕಣ್ಣೋಟ ಚೇಷ್ಟೆ
ಕಂಬನಿ ಮಿಡಿಯುವ ಪಾತ್ರದಾರಿಗಳ ನಟನಾಮಣಿ
ಬದುಕಿನಲ್ಲಿ ಪ್ರೀತಿ ನಂಬಿಕೆ ವಿನಹ ಬೇರೆಲ್ಲಾ ತೃಣವಷ್ಟೇ
ರವಿಮಾಮನ ಕೈ ಕುಸುರಿಯಲ್ಲಿ ಮೂಡಿಬಂದ ಚಿತ್ರಣ
ಮನೆದೇವ್ರು ಕನ್ನಡ ಸಿನಿಮಾ ರಂಗದಲ್ಲಿ ಗೀತ ಗಾನ
ಕಾಮಕ್ಕೂ ಮೀರಿದ ಬದುಕು ಪ್ರೇಮ ಸಾರಿದ ಕತೆ
ಪ್ರೇಮವೇ ಬದುಕು ಅರಿತರೆ ದಾಂಪತ್ಯ ಸುಖ ಯಾನ
✒ ರಚೀ ನೇಸರ
(ರವೀ ಟಿ ಚೀಳಂಗಿ ಚಿತ್ರದುರ್ಗ)
ಮೊ: ೯೯೪೫೫೨೨೮೫೨