ಚಿತ್ರದ ಬಗ್ಗೆ ನನ್ನ ಅನಿಸಿಕೆ..
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಚಿತ್ರ 'ನೆನಪುಗಳ ಸೂಜಿಯಲ್ಲಿ ಭಾವಗಳ ದಾರವನ್ನು ನಾಜೂಕಾಗಿ ಪೋಣಿಸಿದಂತಿದೆ'. ಜೀವನದ ಕೊನೆಯ ಹೊಸ್ತಿಲಲ್ಲಿ ನಿಂತು ತನ್ನ ಬಾಲ್ಯ ಜೀವನದ ನೆನಪುಗಳನ್ನು ಹೇಳುವ ಪ್ರಾಯದ ನಾಯಕ ವಿಜಯ್ ರಾಘವೇಂದ್ರ. ನೆನಪುಗಳ ದೋಣಿಯಲ್ಲಿ ಕಥಾ ನಾಯಕನೇ ನಾವಿಕನಾಗಿ ನೋಡುಗರನ್ನು ಕರೆದೊಯ್ಯುವ ಪರಿ ಚೆಂದವಾಗಿದೆ. ಹಳೆ-ಹೊಸ ಜೀವನ ಶೈಲಿಯನ್ನು ಎಲ್ಲಿಯೂ ಅತಿಯಾಯಿತು ಎಂದೆನಿಸದಂತೆ ಚಿತ್ರಿಸಿದ್ದಾರೆ. ಒಟ್ಟಿನಲ್ಲಿ ಕಥೆಯು ಬಾಲ್ಯದ ನೆನಪುಗಳನ್ನು ಮೆಲಕು ಹಾಕುವಂತೆ ಮಾಡುತ್ತದೆ.