ವಕೀಲರ ಪಾತ್ರದಲ್ಲಿ ಬರುವ ಸೂರ್ಯ ಬುಡಕಟ್ಟು ಕುಟುಂಬಕ್ಕಾಗಿ ಪ್ರಕರಣವನ್ನು ತೆಗೆದುಕೊಳ್ಳುತ್ತಾರೆ. ಅದೊಂದು ಸವಾಲಿನ ಕೆಲಸ ಎಂದು ಗೊತ್ತಿದ್ದು ಅದಕ್ಕಾಗಿ ಶ್ರಮ ವಹಿಸುತ್ತಾರೆ. ಇದಕ್ಕೆ ಐಜಿ ಪಾತ್ರದಲ್ಲಿರುವ ಪ್ರಕಾಶ್ ರಾಯ್ ಸಾಥ್ ಕೊಡುವ ರೀತಿ ಅದ್ಭುತ. ಹಾಗೂ ಸೆಂಗಾಣಿ ಮತ್ತು ರಾಜಕಣ್ಣು ಪಾತ್ರ ಮಾಡಿರುವ ಇರ್ವರು ಈ ಬಾರಿಯ ಫಿಲಂ ಅವಾರ್ಡ್ ಗೆ ಹೇಳಿ ಮಾಡಿಸಿದವರು. ಇಡೀ ಚಲನಚಿತ್ರವು ಬುಡಕಟ್ಟು ಜನರ ಮೇಲೆ ಪೋಲೀಸರ ದೌರ್ಜನ್ಯವನ್ನ ಚಿತ್ರಿಸುತ್ತದೆ ಮತ್ತು ಅವರ ಮೇಲೆ ಸುಳ್ಳು ಕೇಸ್ ಹಾಕುವ ಪರಿ, ಕೊಡುವ ಚಿತ್ರಹಿಂಸೆಯನ್ನ ಬಿಂಬಿಸುತ್ತದೆ. ಆ ದಿನಗಳಲ್ಲಿ ಈ ಬಡವರು ಅನುಭವಿಸಿದ ನೋವನ್ನು ಪರದೆಯ ಮೇಲೆ ನೋಡುವುದು ನಿಜವಾಗಿಯೂ ಹೃದಯ ವಿದ್ರಾವಕ ಮತ್ತು ಭಯಾನಕವಾಗಿದೆ. ಈ ಚಿತ್ರದ ಕೊನೆಗೆ ಮನಸು ಕ್ಷಣಮಾತ್ರ ಮೌನವಾಗಿ ಹೇಳದೆ ಕಣ್ಣಲ್ಲಿ ನೀರು ಜಾರುವುದು ಮಾತ್ರ ನಿಶ್ಚಿತ.
@ಜೈ ಭೀಮ್❤
ಪ್ರೀತಿ. ಟಿ.ಎಸ್