ಸಪ್ತಾಸಾಗರದಾಚೆ ಎಲ್ಲೋ - Side B
ಆ ಕಡಲ ತೀರದಿ ಬೆಸೆದ
ಬಾಂಧವ್ಯ ಏಳೇಳೂ ಜನ್ಮಕ್ಕೂ
ಶಾಶ್ವತವಾಗಿ ಉಳಿಯಿತು
ಹಾಗೇ ಮನದಿ ನೆನಪುಗಳು
ಮರೆಯಾಗದೇ ಇರುವಂತಾಯಿತು
ನಿಷ್ಕಲ್ಮಶ ಪ್ರೇಮದಿ
ತನ್ನವರಿಗಾಗಿ ಜೀವನವನ್ನೇ
ತ್ಯಾಗ ಮಾಡಿಯಾಯಿತು
ಪ್ರೇಯಸಿಯ ಮೊಗದಿ
ಒಂದೇ ಒಂದು ನಗುವ ತರಲು
ತನ್ನ ಬದುಕನ್ನೇ ಬದಿಗಿಟ್ಟಾಯಿತು
ರೂಪಸಿಯ ಸಂತೋಷವು
ಹಾಡುವುದರಲ್ಲಿತ್ತೆಂದು
ತಿಳಿದು ಪ್ರೇಮಿಯೂ ಅವಳ
ಮೊಗದಿ ಸಂತಸ ಮೂಡಿಸಲು
ಪ್ರಯತ್ನಿಸಿದ
ಆದರೆ ಪುಟ್ಟಿ ಮನಬಿಚ್ಚಿ
ಹಾಡುತ್ತಿದ್ದದ್ದು ಹೃದಯದಿ
ಮನೆ ಮಾಡಿದ್ದ ಮನುಗಾಗಿ
ಅವನಿಲ್ಲದೇ ಮನಬಿಚ್ಚಿ ಹೇಗೇ
ಹಾಡುವಳು ರೂಪಸಿ.......
ಪ್ರೇಮ ಒಬ್ಬರಿಗೆ ಮಾತ್ರ ಸೀಮಿತ
ಅದು ನಿಷ್ಕಲ್ಮಶವಾಗಿದ್ದರೆ
ಪ್ರೇಮಿಗಳು ಸತ್ತರೂ ಪ್ರೇಮ ಸಾಯದು.....
- ಅಶ್ವಿನಿ ನಕ್ಷತ್ರ