ಮೊದಲ ಸಿನಿಮಾದಲ್ಲೇ ಅನುಭವ ಇರುವಂತ ನಟನೆ.
ಪ್ರೇಕ್ಷಕರ ನೀರಿಕ್ಷೆಗೆ ತಕ್ಕ ಆ್ಕಕ್ಟಿಂಗ್ ಇದೆ.
ಇಂದಿನ ದಿನಗಳಲ್ಲಿ ಯುವ ಸಮೂಹ ಹೇಗಿದೆ, ಕುಟುಂಬದ ಜವಾಬ್ದಾರಿ ಇಲ್ಲದೆ ತಂದೆಯ ಹಣದಿಂದ ಹೇಗೆ ಬದುಕುತ್ತಾರೆ,
ತಂದೆ ಸೋತುಸುಣ್ಣವಾದಾಗ ಆ ಕುಟುಂಬದ ಜವಾಬ್ದಾರಿ ನಾಯಕ ನಟ ಯಾವ ರೀತಿಯ ಪರಿಸ್ಥಿತಿ ನಿಭಾಯಿಸುತ್ತಾನೆ ಎಂಬ ಕಥೆಯನ್ನು ಸುಂದರವಾಗಿ ನಿರ್ದೇಶಕರು ಚಿತ್ರಿಸಿದ್ದಾರೆ.
ಸ್ವಂತ ದುಡ್ಡಲ್ಲಿ ಶೋಕಿ ಮಾಡ್ಬೇಕು ಅಪ್ಪನ್ ದುಡ್ಡಲ್ಲಿ ಅಲ್ಲಾ ಎನ್ನುವ ಸಂಭಾಷಣೆ ಇಂದಿನ ಯುವ ಸಮಾಜವನ್ನು ಬಡಿದೆಬ್ಬಿಸುತ್ತದೆ.
ಇಂಜಿನಿಯರಿಂಗ್ ಓದಿದರೂ ತಕ್ಷಣ ಕೆಲಸ ಸಿಗುವುದಿಲ್ಲ, ಬದುಕು ಕಟ್ಟಿಕೊಳ್ಳಲು ಯಾವುದಾದರೂ ಕೆಲಸ ಮಾಡಲೇ ಬೇಕು ಎಂದು ಹೇಳುವ ದೃಶ್ಯ ಗಳು ಅದ್ಭುತ.
ನಟನೆಯಲ್ಲಿ ಯುವ ಒಳ್ಳೆಯ ಭರವಸೆಯನ್ನು ಮೂಡಿಸಿದ್ದಾರೆ.
ಸಿನಿಮಾದಲ್ಲಿ ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪ್ರತಿ ಹಂತದಲ್ಲೂ ಜೊತೆಯಲ್ಲೇ ಇರುತ್ತಾರೆ.
ಫೈಟ್ಸ್, ಡಾನ್ಸ್ ನೋಡಲು ಸೊಗಸಾಗಿದೆ.
ತಂದೆಗೆ ಮಗ ಯಾವಾಗಲೂ ಜೊತೆಯಾಗಿರಬೇಕು. ಅವರು ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ ಅವರಿಗೆ ಒಂದಿಷ್ಟು ಸಮಯವನ್ನಾದರೂ ಮೀಸಲಿಡಬೇಕು. ಆಗಲೇ ಮಕ್ಕಳ ಜೀವನ ಸಾರ್ಥಕವಾಗೋದು.