ಮಾಲ್ಗುಡಿ ಡೇಸ್ ಒಂದು ಅದ್ಭುತ ಕಥೆ ಶಂಕರನಾಗ್ ಅವರ ನಿರ್ದೇಶನದಲ್ಲಿ ಮೂಡಿಬಂದ ಆರ್. ಕೆ. ನಾರಾಯಣ ಅವರು ಬರೆದ ಒಂದು ಒಳ್ಳೇ ಕಥೆಯನ್ನ ಎಷ್ಟು ಚೆನ್ನಾಗಿ ಸಿನೆಮಾ ಮುಖಾಂತರ ಆಗಿನ ಕಾಲದ ಜನರ ವಿಚಾರ - ಆಚಾರಗಳನ್ನು, ಸುತ್ತ ಮುತ್ತಲಿನ ಪರಿಸರ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನುವುದನ್ನ ಹಾಗೂ ಸ್ವಾಮಿ ಮತ್ತು ಅವನ ಸ್ನೇಹಿತರು ಇವೆಲ್ಲವನ್ನು ಎಷ್ಟು ಅರ್ಥಪೂರ್ಣವಾಗಿ ಜನರ ಮುಂದೆ ಪ್ರಸ್ತುತ ಪಡಿಸಿದ್ದಾರೆಂದರೆ ಅದು ಶಂಕರನಾಗ್ ಅವರಿಗೆ ಮಾತ್ರ ಸಾಧ್ಯವಾದದ್ದು ಇನ್ನೂ ಬೇರೆ ಯಾರಿಗೂ ಅದು ಸಾಧ್ಯವಿಲ್ಲ. ಹಾಗೆ ನಾವು ಬೇರೆ ಭಾಷೆಯ ಸಿನೆಮಾಗಳಿಗೆ ಮಾರುಹೋಗುವ ಸ್ವಭಾವದವರು, ಹಾಗಂತ ನಮ್ಮ ಭಾಷೆಯನ್ನು ಬಿಟ್ಟು ಕೊಟ್ಟವರಲ್ಲ ಹಾಗಾಗಿ ನಾವು ನಮ್ಮ ಕನ್ನಡ ಸಿನಿಮಾಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ನಾನು ನೋಡಿದ ಬೇರೆ ಭಾಷೆಯ ಸಿನಿಮಾಗಳಿಗಿಂತ ಭಿನ್ನವಾದದ್ದು ನಮ್ಮ ಈ ನನ್ನ ಮಾತೃಭಾಷೆಯ ಮಾಲ್ಗುಡಿ ಡೇಸ್.