ಮಡಮಕ್ಕಿ....
ಮೊದಲು ಈ ಸಿನಿಮಾ ಬಿಡುಗಡೆಯಾದಾಗ
ಯಾವ್ದೊ ಇದು ಅಂತ ಹಾಸ್ಯ ಮಾಡಿದ್ದೆನಾಗ;
ಇಂದು ಟಿ.ವಿಯಲ್ಲಿ ಆಯಿತು ಪ್ರಸಾರ ಮತ್ತೆ
ಇರಲಿ ನೊಡೋಣ ಎಂದು ಕುಂತೆ ಪರಿವಾರದ ಜೊತೆ
ಭೂಗತ ಜಗತ್ತಿನಿಂದ ಬಾರದ ನಲಿವು
ಹರಿಸಿದ ರಕ್ತದಿಂದ ಬರುವ ನೋವು
ಸಂಬಂಧಗಳ ಸುತ್ತೊಲೆಯಲ್ಲಿ ಬೆರೆತು
ಖಾಕಿಯ ಆಡಳಿತದ ಸರ್ಪಗಾವಲಿನಲ್ಲಿ ಅವಿತು
ಗೆಳೆತನದ ಗಟ್ಟಿ ವಜ್ರ ಹೊಳೆಯಲು
ಗುಂಡಿಗೆಯಲ್ಲಿ ರಕ್ತದ ಬಂಧ ಸೆಳೆಯಲು
ಅಮ್ಮನ ಪ್ರೀತಿಯ ಸಾರೋ
ಮಗನ ಕರ್ತವ್ಯವ ತಿಳಿಸುವ ಬಾರೋ
ಎಂಬಂತೆ ಚಿತ್ರಿಕರಿಸಿದ ದೃಶ್ಯಕಾವ್ಯ ನಿಜಕ್ಕೂ ಅಧ್ಬುತ
ನೋಡಿ ಮನ ಒಂದು ಕ್ಷಣ ಮೌನವಾಯಿತು