ಕನ್ನಡ ಭಾಷೆಯ ಘನತೆ ಮತ್ತು ಗೌರವವನ್ನು ಇಳಿಸುತಿದ್ದಿರಿ. ಇಂತಹ ಧಾರಾವಾಹಿಗಳನ್ನು ಕಂಡಿತವಾಗಿಯು ಪ್ರೋತ್ಸಾಹಿಸುವುದಿಲ್ಲ. ಧಾರಾವಾಹಿಯಲ್ಲಿ ಪ್ರಮುಖವಾಗಿ ನಟಿಸುವ ನಾಯಕಿಗೆ ಸರಿಯಾಗಿ "ಹ" ಕಾರ ಮತ್ತು "ಅ" ಕಾರ ವ್ಯತ್ಯಾಸ ಗೊತ್ತಿಲ್ಲ. "ಹಬ್ಬ" ಕ್ಕೆ "ಅಬ್ಬ" ಎನ್ನುತ್ತಾಳೆ. "ಹಣೆಬರಹ" ಶಬ್ದ "ಅನೆಬರಹ" ಎನ್ನುತ್ತಾಳೆ. ಇಂತಹ ನೂರಾರು ಪದಗಳ ತಪ್ಪು ಉಚ್ಚಾರಣೆ ಮಾಡಿ ಕನ್ನಡ ಭಾಷೆಯನ್ನು ಹಾಳು ಮಾಡಿದ್ದೀರಿ. ತುಂಬಾ ಬೇಸರದ ಸಂಗತಿ. ದಯವಿಟ್ಟು ತಿದ್ದಿಕೊಳ್ಳಿ. ಕನ್ನಡವನ್ನು ಉಳಿಸಿ ಮತ್ತು ಬೆಳೆಸಿ.