ತಂಗಳನ್ ಎಲ್ಲರನ್ನು ಗಂಭೀರವಾಗಿ ಕಾಡುತ್ತಿದೆ. ಹೊಟ್ಟೆಯ ಒಳಗೆ ಕೈಯಿಟ್ಟು ದೆವುತ್ತಿದೆ (ಕೆರೆಯುತ್ತಿದ್ದೆ). ಕೆಲವರು ಬಹಿರಂಗವಾಗಿ ವಾಂತಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರಿಗೆ ರಕ್ತ ಕುದಿಯುತ್ತದೆ, ಆದರೆ ಮೂಲ ನಿವಾಸಿಗಳಿಗೆ ಕಣ್ಣಲ್ಲಿ ನೀರು ಸುಳಿದಾಡುತ್ತದೆ, ಭೂಮಿಯ ಮೇಲಿನ ಅಲ್ಪಸ್ವಲ್ಪ ಮರ್ಯಾದೆಗಾಗಿ ಅವರು ಮಾಡಿದ ಅಳಲುಗಳು, ಬೆಟ್ಟಗಳನ್ನು ದಾಟಿ ನಡೆದ ಯೋಜನೆಗಳು, ತೊಳೆದ ಹಾದಿಗಳು, ಇತಿಹಾಸದುದ್ದಕ್ಕೂ ಹರಿದ ರಕ್ತ,ಈ ಚಿತ್ರದಲ್ಲಿ ದೃಶ್ಯದ ರೂಪದಲ್ಲಿ ನೋಡುತ್ತಿದ್ದರೆ ಹೃದಯ ಭಾರವಾಗಿ ಅಳುತ್ತದೆ....
ಇಲ್ಲಿಯವರೆಗೂ ಕಥೆ, ಕಾಲ್ಪನಿಕ ಕಥೆಗಳು ಇತಿಹಾಸವಾಗಿ ಸಾಗಿದಂತೆ ನಮ್ಮ ಜನರ ಜೀವನವನ್ನು,ಇದ್ದುದು ಇಲ್ಲದಂತೆ ಇರುವುದನ್ನು ಇಲ್ಲದಂತೆ ತಿಮ್ಮಿಯ ಬೋಮ್ಮಿಯ ಮಾಡಿ, ಕೆಲವರ ಬದುಕನ್ನೇ ಎಲ್ಲರ ಬದುಕನ್ನಾಗಿಸಿ, ಕಾಗಕ್ಕ ಗುಬ್ಬಕ್ಕ ಕಥೆಗಳು ಹೇಳಿ,ಜನರ ಕಣ್ಣಿಗೆ ಮಣ್ಣು ಹೇರಚೋ ಕಾಲ ಹೋಯ್ತು,
ಇಂದು ನಾವು ಓದುತ್ತಿರುವುದು ಕೇವಲ ರಾಜರ ಯುದ್ದ ಅಧಿಕಾರ ಹಸ್ತಾಂತರದ ಅಸ್ಪಷ್ಟ ಇತಿಹಾಸ ಮಾತ್ರ.ದಲಿತರು ಈ ಮಣ್ಣಲ್ಲಿ ರಾಜರಿಗಾಗಿ ಸತ್ತು ಧೂಳಾಗಿ ಹೋಗಿದ್ದಾರೆ.
ಅವರನ್ನು ಇತಿಹಾಸದಿಂದ ಮರೆಮಾಚಲಾಗಿದೆ.