ಜ್ಞಾನಂ
ಅತ್ಯುತ್ತಮವಾದ ಚಿತ್ರ
ಚಿತ್ರದ ಪ್ರತಿಯೊಂದು ದೃಶ್ಯದಲ್ಲಿ
ಅಡಗಿರುವ ಸಾಮಾಜಿಕ ಕಳಕಳಿ ತುಂಬಾ ಅರ್ಥಗರ್ಭಿತವಾಗಿರುವಂತಹದ್ದು ...
ಬುದ್ಧಿಮಾಂದ್ಯ ಮಕ್ಕಳ ಕುರಿತಾದ ಚರ್ಚಿತವಾಗಿರುವ ಕೆಲವೊಂದು ಕಾಲ್ಪನಿಕ ವಿಷಯಗಳು ವೈಜ್ಞಾನಿಕವಾಗಿ , ಆಧಾರಗಳಿಲ್ಲದಿದ್ದರೂ, ನಿರ್ದೇಶಕರ ಕಾಲ್ಪನಿಕ ಕಥೆಯಲ್ಲಿ ಸಾಗುವ ಬುದ್ಧಿಮಾಂದ್ಯ ಮಗುವಿನ ಕಲ್ಪನಾ ಲೋಕದ ಚಿಂತನ-ಮಂಥನ ಅದ್ಭುತವಾದದ್ದು...
ನೈಜ ಘಟನೆಗಳ ಕಥೆಯನ್ನು, ಕಾಲ್ಪನಿಕ ಆಯಾಮ ಕೊಟ್ಟು, ಆಯಾಮಗಳಿಂದ ಹೊಸದೊಂದು ಪ್ರಯೋಗವನ್ನು ಮಾಡುವುದು ಕಷ್ಟವಾದರೂ, ಈ ಜ್ಞಾನಂ ಚಿತ್ರದಲ್ಲಿ , ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಈ ತರಹದ ಪ್ರಯೋಗಾತ್ಮಕ ಚಿತ್ರಗಳು ಹೆಚ್ಚು ಬರಲಿ... ಸಮಾಜದ ಸ್ವಸ್ಥತೆಯನ್ನು ಕಾಪಾಡುವ ನಿಟ್ಟಿನಲ್ಲಿ , ಪ್ರತಿಯೊಬ್ಬರೂ ಜ್ಞಾನಂ ಚಿತ್ರವನ್ನು ವೀಕ್ಷಿಸಿ ... ಸುಮಧುರವಾದ ಸಂಗೀತ, ಚಿಕ್ಕಮಕ್ಕಳ ಮನೋಜ್ಞ ಅಭಿನಯ, ಹೊಸಬರ ಆಲೋಚನೆ, ಪ್ರಯೋಗಗಳಿಗೆ ಎಲ್ಲರೂ ಸ್ಪಂದಿಸೋಣ . ✍️ಭೂಷಣ್ B M