"ಹೂವು, ಕಲ್ಲು ಸೇರಿದರೆ ಭಗವಂತ ಮೂಡುವ ಹಾಗೆ,
ಹುಲಿ ಕರು ಜೋಡಿ ನೋಡಿ ದೇವ್ರನ್ನ ಮರಿಬೋದೆ ಹೇಗೆ?!"
"ಬೇರೆನೂ ತಿಳಿದಿಲ್ಲ ನಾವೆಲ್ಲಾ ಮನುಜರು"!
- ಸೂತ್ರಧಾರ
"ಹಿಂದೂ - ಮುಸಲ್ಮಾನ - ಕ್ರೈಸ್ತ " ಮೂರರ ಸಮಾಗಮ
"ಅಪ್ಪ-ಮಗನ ನಡುವಿನ ಬಾಂಧವ್ಯ"
"ರಾಜಕೀಯವೆಂಬ ಚದುರಂಗದಾಟದ ನೋಟ"
"ಸಮೀರಾ- ಭಾನುವಿನ ಮುಗ್ದತೆ"
ಯಾವುದೇ ಭಾವನೆಗಳು ಕೊಂಡಿಯಿಂದ ತಪ್ಪಿಹೋಗದಂತೆ, ಎಲ್ಲವನ್ನೂ ಅಚ್ಚುಕಟ್ಟಾಗಿ
ಪರದೆಯ ಮೇಲೆ ಕಾಣುವಂತೆ ಚಿತ್ರವನ್ನು ಹೆಣೆದಿರುವ ಶ್ರೇಯಸ್ಸು ಖಡಾಖಂಡಿತವಾಗಿ "ಸೂತ್ರದಾರನಿಗೆ" ಸಲ್ಲಬೇಕಾದುದು!
ಸಂಗೀತ, ಛಾಯಾಗ್ರಹಣ, ಸಂಕಲನ, ಎಲ್ಲವೂ ಮೆಚ್ಚುವಂತದ್ದು!
ಮರುಭೂಮಿಯಲ್ಲಿ ನೀರು ಸಿಕ್ಕಿದ ಹಾಗೇ ಕನ್ನಡಕ್ಕೆ
" ಒಂದಲ್ಲಾ ಎರಡಲ್ಲಾ" ಎಂಬುದು ನನ್ನ ಅಭಿಪ್ರಾಯ!
ಪ್ರತಿಯೊಬ್ಬ ಕನ್ನಡ ಸಿನಿರಸಿಕ ನೋಡಲೇಬೇಕಾದಂತಹ ಚಿತ್ರವಿದು "ಒಂದಲ್ಲಾ ಎರಡಲ್ಲಾ"!
ಎಲ್ಲರೂ ದಯವಿಟ್ಟು "ಒಂದಲ್ಲಾ ಎರಡಲ್ಲಾ " ಚಿತ್ರವನ್ನು ತಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೋಡಿ ಹಾಗೂ ಚಿತ್ರವನ್ನ ಉಳಿಸಿ!