ಪುಸ್ತಕ :- ಕರಿಸಿರಿಯಾನ
ಲೇಖಕರು :- ಡಾ.ಕೆ ಎನ್ ಗಣೇಶಯ್ಯ
ಪುಟಗಳು :- 224
ಬೆಲೆ:-205ರೂ .
‘ಕರಿಸಿರಿಯಾನ’ಒಂದು ರೋಚಕವಾದ ಕಾದಂಬರಿ ಮೊದಲ ಪುಟ ಓದಲು ಶುರುಮಾಡಿದ ಓದುಗನನ್ನು ಬೆಂಬಿಡದೆ ಓದಿಸಿಕೊಂಡು ಹೋಗುವ ಕಾದಂಬರಿಯಲ್ಲಿ ಇಬ್ಬರು ನಾಯಕಿರಿದ್ದು ಪೋಜಾ ಮತ್ತು ಭಾವನಾ ಎಂಬುವವರು. ವಿಜಯನಗರದ ಸಾಮ್ರಾಜ್ಯದ ಪತನದ ಕಾಲದಲ್ಲಿ ವಿಜಯನಗರ ಅಪಾರ ಸಂಪತ್ತನ್ನು ಆನೆಗಳ ಮೇಲೆ ಸಾಗಿಸಿ ಒಂದು ಗುಪ್ತ ಸ್ಥಳಗಳಲ್ಲಿ ಇಡಲಾಯಿತು ಇದನ್ನರಿತ ಕೆಲವು ಗುಂಪುಗಳು ಆ ನಿಧಿಗಾಗಿ ಶೋದ ನಡೆಸುತ್ತವೆ. ಶಿಲ್ಪಕಲೆ ಮತ್ತು ಜಾನಪದದ ಜಾಡು ಹಿಡಿದು ಸಾಗುವ ಕಾದಂಬರಿ ಓದುಗನಿಗೆ ಒಂದು ವಿಶೇಷವಾದ ಅನುಭವ ನೀಡುವಲ್ಲಿ ಗೆದ್ದಿದೆ ಎಂದು ಹೇಳಬಹುದು.
ಹಂಪಿ ತಿರುಪತಿ ಪೆನುಕೊಂಡ ಹೀಗೆ ಸುತ್ತಾಡುತ್ತ ಬರೆಯುವ ಲೇಖಕರು ಅಲ್ಲಿನ ವಿವರ ನೈಜ ಘಟನೆಗಳ ಆದಾರ ಓದುಗನಿಗೆ ಕೊಡುತ್ತ ಸಾಗುವುದು ಇನ್ನೊಂದು ವಿಶೇಷ. ಅಷ್ಟಕ್ಕೂ ನಿಧಿ ಹುಡುಕಾಟದಲ್ಲಿ ತೊಡಗಿದ್ದು ಯಾರು? ಅವರೆಲ್ಲ ಏನಾಗುತ್ತಾರೆ? ಅವರಿಗೆ ನಿಜಕ್ಕೂ ನಿಧಿ ಸಿಗುತ್ತದಯೇ? ಇದೆಲ್ಲಾ ತಿಳಿದುಕೊಳ್ಳಲು ನೀವು ಈ ಕಾದಂಬರಿ ಒಮ್ಮೆ ಓದಲೇಬೇಕು.
ಕೆಲವು ತಿಂಗಳುಗಳ ಹಿಂದೆ ವಸುಧೇಂದ್ರ ಅವರ ತೇಜೋ ತುಂಗಭದ್ರಾ ಓದಿದ ನನಗೆ ಕರಿಸಿರಿಯಾನ ಮತ್ತಷ್ಟು ಹತ್ತಿರವಾಯ್ತು. ವಿಶಿಷ್ಟ ಸರಳ ಶೈಲಿಯ ಬರವಣಿಗೆ; ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿಯಾದರೂ ನಿಧಾನವಾಗಿ ಓದಿದರೆ ಇನ್ನಷ್ಟು ಆಳವಾಗಿ ಅರ್ಥೈಸಿಕೊಳ್ಳಬಹುದು ಎನ್ನುವುದು ನನ್ನ ಅನುಭವದ ಮಾತು.
ವಿಜಯನಗರದ ವೈಭವ,ರಾಜರ ಆಳ್ವಿಕೆಯಲ್ಲಿ ನಡೆದ ಘಟನೆಗಳು ಇನ್ನೂ ಎಷ್ಟೋ ವಿಸ್ಮಯ ರೂಪದಲ್ಲಿಯೇ ಇದೆ ಎನಿಸುತ್ತದೆ ಆದರೆ ಕರಿಸಿರಿಯಾನದಂತಹ ಕಾದಂಬರಿ ಓದುತ್ತಾ ಒಂದೊಂದು ವಿಷಯಗಳು ಗೊತ್ತಾಗುತ್ತ ಹೋದಂತೆ ಓದುಗ ಹುಬ್ಬೇರಿಸುವಂತೆ ಮಾಡುತ್ತದೆ. ಯಾವುದಕ್ಕೂ ಈ ಕಾದಂಬರಿ ಓದಿಯೇ ಅದರ ರುಚಿಯನ್ನು ಸವಿಯಬೇಕು.
ನೀವು ಓದಿ ನಿಮ್ಮವರಿಗೂ ಓದಿಸಿ
ಧನ್ಯವಾದಗಳೊಂದಿಗೆ
ರವಿ ಶಿವರಾಯಗೊಳ