ಬಿರಿಯಾನಿ.. ಕಾಲ್ ಸೂಪು..ಚಿಲ್ಲಿ ಚಿಕನ್...ಮೇಲೊಂದು ನೈಂಟಿ...ಆಮೇಲೊಂದು ಧಮ್ಮು..ಒಂದು ಬೀಡಾ....
ಇಷ್ಟೆಲ್ಲಾ ಆದಾಗ ಹೆಂಗನ್ಸುತ್ತೋ....ಹಂಗಿದೆ...
ದರ್ಶನ್ ಮುಂದೆ ನಾಯಕಿ ಪೀಚು ಪೀಚು ಅನ್ಸಿದ್ರೂ...ಸ್ವಲ್ಪ ರೆಡಿಯಾಗೇ ಬಂದಿದಾಳೆ...ಬಿರಾದಾರ್ ಅವರಿಗೆ...ಇಷ್ಟು ಗಮನ ಸೆಳೆಯೋ ಪಾತ್ರ ಸಿಕ್ಕಿ ಅದ್ಯಾವ ಕಾಲವಾಗಿತ್ತೋ..
ಇನ್ನ ಕಥೆ ಆ ಕಾಲದ ಸಾಮಾಜಿಕ. ಆರ್ಥಿಕ ತಲ್ಲಣಗಳ ಒಂದು ಗೊಂಚಲು...ಇಲ್ಲಿ ಸೇಡು ಇದೆ..ಮೋಸ ಇದೆ..ಉಪದೇಶ ಇದೆ.ಸಂಬಂಧಗಳ ತೊಳಲಾಟಗಳಿವೆ...ಇದೆಲ್ಲವನ್ನೂ ಮೀರಿ...ದರ್ಶನ್ ಅನ್ನೋ ದೈತ್ಯ ಇದಾರೆ...ಆಕ್ಷನ್ ಬ್ಲಾಕ್ ಗಳಂತೂ....ಭಯಂಕರ..ಬೆಂಕಿ..... ಹಾಡುಗಳು ಆಹಾ ಓಹೋ ಅಲ್ಲದಿದ್ರೂ...ಹರಿಕೃಷ್ಣ ರ ಹಿನ್ನೆಲೆ ಸಂಗೀತ..ಇಡೀ ಸಿನಿಮಾವನ್ನ ಹೊತ್ತು ಮೆರೆಸುತ್ತೆ.....ಒಟ್ಟಾರೆ ಎರಡೂ ಮುಕ್ಕಾಲು ಗಂಟೆ...ಬೀಗರೂಟ...
ನಿರ್ದೇಶಕರು...ಹೀರೋಗಿರಿಯ ಹಂಗಿಗೆ ಬೀಳದೇ..ನಾಯಕನ ಎಂಟ್ರಿಗೊಂದು ಬಿಲ್ಡಪ್ ಸಾಂಗು.ಕ್ಲೈಮ್ಯಾಕ್ಸ್ ನ ಧೂಳೆಬ್ಬಿಸೋ ಫೈಟ್ ನ್ನ ತುರುಕದೇ....ಗೆದ್ದಿದ್ದಾರೆ....
ನಂಗನ್ಸಿದ್ದು..ಇದುವರೆಗೆ....ದರ್ಶನ್ ನ್ನ ಈ ಲೆವೆಲ್ ಗೆ ದುಡಿಸಿಕೊಂಡ ಬಳಸಿಕೊಂಡ ಸಿನಿಮಾ. ನಿರ್ದೇಶಕ ಮತ್ತೊಬ್ಬರಿಲ್ಲ...ಅಂತಾ....
(ಇದಿಷ್ಟೂ ನನ್ನ ಅಭಿಪ್ರಾಯ.. ನಿಮ್ಮ ಅಭಿಪ್ರಾಯ ನಿಮ್ಮದು)