ಬೆಟ್ಟದ ಜೀವ, ಕಾರಂತರ ಒಂದು ಸರಳ ಹಾಗೂ ಸುಂದರ ಕೃತಿ. ಹಲವು ವರ್ಷಗಳ ಹಿಂದೆ ಅಗಲಿದ ಮಗನ ಬರುವಿಕೆಗಾಗಿ ಪ್ರತಿ ದಿನವು ಕಾದು ಕುಳಿತ ವೃದ್ಧ ದಂಪತಿಗಳ ಜೀವನದಲ್ಲಿ ಆಕಸ್ಮಿಕವಾಗಿ ಆಗಮಿಸುವ ಅತಿಥಿ ಹಾಗೂ ಆತನ ಇರುವಿಕೆಯಲ್ಲಿ ಮೂಡುವ ಪ್ರಸಂಗಗಳು, ಒಂದಷ್ಟು ಹಳೆಯ ಭಾವನಾತ್ಮಕ ನೆನಪುಗಳು, ನೋವುಗಳು, ನಲಿವುಗಳ ಸುತ್ತಾ ಕುಮಾರ ಪರ್ವತದ ತಪ್ಪಲಿನಲ್ಲಿಯೇ ಶುರುವಾಗುವ ಈ ಕಥೆ ಅಲ್ಲೆಯೇ ಕೊನೆಗಾಣುತ್ತದೆ. ಈ ಕಾದಂಬರಿಯ ತುಂಬ ಮನಸ್ಸನ್ನು ಕಾಡುವ ಗಟ್ಟಿತನದ ಏಕೈಕ ಪಾತ್ರ ಗೋಪಾಲಯ್ಯ ಭಟ್ಟ. ಈ ಪಾತ್ರದ ವ್ಯಕ್ತಿತ್ವ, ಜೀವನ ದೃಷ್ಠಿ, ನಡತೆ, ಸ್ವಾವಲಂಬತೆ, ತನ್ನವರಲ್ಲದ ತನ್ನವರಿಗಾಗಿ ಮಿಡಿಯುವ ಆತನ ಹೃದಯ, ತನ್ನ ಸುಧೀರ್ಗ ಜೀವನದಲ್ಲಿ ನಿಷ್ಠೆಯಿಂದ ಆತ ತನಗಾಗಿ ಕಟ್ಟಿಕೊಂಡ ಒಂದು ಸುಂದರ ಕೃಷಿಕ ಸಮಾಜ ಇವೆಲ್ಲವೂ ಅಚ್ಚಳಿದು ನಮ್ಮನ್ನು ಕಾಡುವಂತಹವು ಹಾಗು ಕಾಡಿಸುವಂತಹವು. ನೀವು ತಪ್ಪದೆ ಈ ಕಾದಂಬರಿಯನ್ನು ಓದಿ ಹಾಗೂ ಇತರರನ್ನೂ ಸಹಾ ಓದಲು ಪ್ರೇರೆಪಿಸಿ.📖