ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಅಚ್ಚುಕಟ್ಟಾಗಿತ್ತು.. ಹೆಣ್ಣಿನ ಅಂತರಾಳವನ್ನು ಅದ್ಭುತವಾಗಿ ತೆರೆ ಮೇಲೆ ಅಭಿನಯಿಸುತ್ತಿದ್ದಾರೆ ಎಂಬುದೇ ತಿಳಿಯದಂತೆ ನೈಜ್ಯವಾಗಿ ತೋರಿದ ದಿಯಾ ಆಗಿರಬಹುದು.. ಮುದ್ದು ಮುದ್ದಾಗಿ ಕಾಣೋ ದೀಕ್ಷಿತ್ ಶೆಟ್ಟಿ ಆಗಿರಬಹುದು.. ಆದಿಯ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡ ಪವಿತ್ರ ಲೋಕೇಶ್ ಅವರಿರಬಹುದು ಅಥವಾ ಯಾವುದೇ ಪಾತ್ರ ಆದರೂ ಎಲ್ಲವೂ ಮನಸ್ಸಿಗೆ ನಾಟುವಂತಿತ್ತು..ಇನ್ನು ಇದೀಗ ಮುಖ್ಯವಾಗಿ ಮಾತನಾಡಬೇಕಿರುವ ವ್ಯಕ್ತಿ ಅದು ಆದಿ ಪಾತ್ರಧಾರಿ ಪೃಥ್ವಿ ಅಂಬಾರ್.. ಸಿನಿಮಾ ನೋಡಿದವರ ಮನಸ್ಸನ್ನ ಸಂಪೂರ್ಣವಾಗಿ ಆವರಿಸಿದ ಪೃಥ್ವಿ ಅವರ ಅಭಿನಯ.. ಅಲ್ಲಲ್ಲಾ ಪರಕಾಯ ಪ್ರವೇಶ ನಿಜಕ್ಕೂ ಹ್ಯಾಟ್ಸ್ ಆಫ್ ಬ್ರದರ್..
ಅದರಲ್ಲೂ ತಾಯಿ ಮಗನ ಸೆಂಟಿಮೆಂಟ್.. ಕೊನೆಯ ಆ ದೃಶ್ಯ ಅಮ್ಮನ ಕಳೆದುಕೊಂಡ ಮಗನ ರೋದನೆಯನ್ನು ಪೃಥ್ವಿ ಅವರು ಅಭಿನಯಿಸಿದ ರೀತಿ.. ಜೀವನದಲ್ಲಿ ಕಣ್ಣೀರು ಬರಲ್ಲ ಅನ್ನೋರು ಕೂಡ ಕಣ್ಣೀರಾಕೋದು ಖಂಡಿತ.