#KGF
ಬಡತನದ ಬೇಗೆಯಲಿ ಬೆಂದು ಬಳಲಿ ನಿಡುಸುಯ್ದ ಹೆಣ್ಣು...
ತಾನು ಹೆತ್ತ ಮಗನ ಎದೆಯಲ್ಲಿ ನೆಟ್ಟಳದುವೇ ಹುಣ್ಣು...
ಮಹತ್ವಾಕಾಂಕ್ಷೆಯ ಹುಚ್ಚುತನದಲಿ
ಕುರುಡಾಯ್ತು ಮಗನ ಕಣ್ಣು...
ರಕ್ಕಸ ಅವತಾರಕೆ ಮಗನ ಹಚ್ಚಿ
ತಾನು ಸೇರಿದಳು ಮಣ್ಣು...
ಆಸೆಯ ಬೇಟೆಗೆ ಹೊರಟಿತವನ ಯಾನ ಮುಂಬೈ ಮಹಾನಗರಿಗೆ...
ಕಡಲ ಕಾಳಸಂತೆಯ ನಡುವೆ ಕತ್ತಲ ಗಲ್ಲಿಗಳಲಿ ರಾಜನಂತೆ ಮೆರವಣಿಗೆ...
ಸಿಡಿಲ ಹಿಡಿಯ ತಪಿಸುವವನಿಗೆ
ಚಿಮ್ಮಬೇಕೆನಿಸುವುದು ಮುಗಿಲೆಡೆಗೆ...
ರಕ್ತ ಪೀಪಾಸುಗಳ ಲೋಕದಲ್ಲಿ
ನರಕಾಸುರನ ಅಟ್ಟಹಾಸದ ದೀವಳಿಗೆ...
ಮುಷ್ಟಿಯಲಿ ಮಣ್ಣಿಡಿದು ಜನಿಸಿದವನು ಮರಳಿದನು
ತನ್ನೂರಿಗೆ...
ಧೂಳ ಕೂಪದಿ ಹೊನ್ನ ಹೆಕ್ಕುವ
ಹರಕಲು ಬಟ್ಟೆ ಕೊಳಕು ಮೈನ
ಜನರೆಡೆಗೆ...
ಮಾರಣ ಹೋಮದ ಸಂಚನು
ಹೆಣೆದು ಬಂದವನಿಗೆ ಅಂತಃಕರಣ
ಅಲುಗಿತು ಕಡೆಗೆ...
ಆದರಾಮಸ್ ಎಂಬ ಅರ್ತನಾದಕೆ
ಮನಮಿಡಿದು ಮುನ್ನುಡಿಗೈದ ದುರುಳರ ನರಬಲಿಗೆ...
A poetic storyline of cinema KGF which has made a huge impact on the kannada film industry...
PSChandrashekar
(22.12.2018)