ಬಹಳ ಒಳ್ಳೆಯ ಸಿನಿಮಾ, ನಿಜವಾಗಲೂ ಇದು ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಬಂದಿದ್ದರೆ ಕನ್ನಡದವರೇ ಮುಗಿಬಿದ್ದು ನೋಡುತ್ತಿದ್ದರು. ಸೊಗಸಾದ ಅಭಿನಯ, ಸುಮಧುರ ಹಾಡುಗಳು, ಕಣ್ಮನ ಸೂರೆಗೊಳ್ಳುವ ಛಾಯಾಗ್ರಹಣ, ಮೈನವಿರೇಳಿಸುವ ಚಿತ್ರಕಥೆ ಸಂಭಾಷಣೆ, ಕೆಲವೊಮ್ಮೆ ಸೀಟಿನ ತುದಿಗೆ ಬಂದು ಕೂರುವ ಸನ್ನಿವೇಶಗಳು ಪೈಪೋಟಿಗೆ ಬಿದ್ದಂತೆ ನಟಿಸಿರುವ ಕಲಾವಿದರು ಹಿನ್ನೆಲೆ ಸಂಗೀತ ಅಬ್ಬಬ್ಬಾ ಯಾವುದನ್ನು ವರ್ಣನೆಮಾಡೋದು ತಿಳಿಯೋದಿಲ್ಲ. ಇಂದು ಸಿನಿಮಾ ನೋಡಿದ ಖುಷಿಗಿಂತ ಇಡೀ ಚಿತ್ರಮಂದಿರದಲ್ಲಿ ಇಪ್ಪತ್ತು ಜನರೂ ಇರಲಿಲ್ಲ ಎನ್ನುವ ನೋವು ಕೋಪ ಹತಾಶೆ ಖುಷಿಗಿಂತ ಹೆಚ್ವು ಅನ್ನೋದು ಖೇದಕರ😓 ದಯವಿಟ್ಟು ಸಿನಿಮಾ ನೋಡದೆ ಇರುವವರು ಥಿಯೇಟರಿಗೆ ಹೋಗಿ ಇಂತಹ ಒಳ್ಳೆಯ ಚಿತ್ರವನ್ನು ಗೆಲ್ಲಿಸಿ ನಿರ್ಮಾಪಕ ನಿರ್ದೇಶಕರು ಇನ್ನಷ್ಟು ಅದ್ಭುತ ಚಿತ್ರಗಳನ್ನು ತೆರೆಗೆ ತರಲು ಸಹಾಯ ಮಾಡಿ🙏🙏🙏