ಸಿನಿಮಾ ನೋಡಿ ತುಂಬಾ ಬೇಜಾರಾಯಿತು. ಆರಂಭದಲ್ಲಿ ಈ ಸಿನಿಮಾ ಯುದ್ದಕ್ಕೆ ಸಂಬಂಧಪಟ್ಟಿದ್ದು ಎಂದು ತಿಳಿದಿರಲಿಲ್ಲ.ಅದು ಬ್ರಿಟಿಷರು ಮತ್ತು ಫ್ರೆಂಚರಿಗೆ ಸಂಬಂಧಿಸಿದೆ ಎಂದು ತಿಳಿಯಿತು. ಆರಂಭದಲ್ಲಿ ಕಡಲ ತೀರದಲ್ಲಿರುವ ಸೈನಿಕರು, ಯುದ್ಧ ವಿಮಾನಗಳು ಅವುಗಳಲ್ಲಿ ಫ್ರೆಂಚರದ್ದು ಯಾವುದು, ಬ್ರಿಟಿಷರದ್ದು ಯಾವುದು ಎಂದು ತಿಳಿಯಲು ಸ್ವಲ್ಪ ತಡವಾಯಿತು. ಫ್ರೆಂಚ್ ನೆಲೆಗಳಲ್ಲಿ ಇದ್ದಂತಹ ಬ್ರಿಟಿಷ್ ಸೈನಿಕರು ತಮ್ಮ ತಾಯಿನಾಡಿಗೆ ಮರಳುವ ಸಂದರ್ಭದಲ್ಲಿ ನಡೆದಂತ ಆ ಘಟನೆಗಳನ್ನು ಈ ಸಿನಿಮಾ ಕಟ್ಟಿಕೊಡುತ್ತದೆ. ತುಂಬಾ ಸೈನಿಕರು ಪ್ರಾಣ ಕಳೆದುಕೊಂಡರು ಮತ್ತು ಹೀನಾಯವಾಗಿ ಸತ್ತರು. ನಾನು ಭಾರತೀಯನಾದ ಕಾರಣ ಬ್ರಿಟಿಷರ ಮೇಲೆ ಸಹಜವಾಗಿ ದ್ವೇ, ಅವರು ತಮ್ಮ ತಾಯಿನಾಡಿಗೆ ಹಿಂದಿರುಗಿ ಹೋಗಲೇಬಾರದು ಅಲ್ಲಿಯೇ ಸಾಯಬೇಕು ಎಂದು ಅನ್ನಿಸಿದ್ದು ಸಹಜ. ನಂತರ ಅಲ್ಲಿನ ಘೋರ ಮಾನವ ಹತ್ಯೆಗಳನ್ನು ಕಂಡು ಮರುಕ ಉಂಟಾಯಿತು. ಆದರೆ ಕೊನೆಯಲ್ಲಿ ಒಬ್ಬ ಬಾಲಕನನ್ನು Dunkirk ನ ಹೀರೋ ಮಾಡಿದ್ದು ಅಷ್ಟು ಸಮಂಜಸವಲ್ಲ ಅನಿಸಿತು. ಕಾರಣ ಆತ ಯುದ್ಧದ ಸಂದರ್ಭದಲ್ಲಿ ಸೈನಿಕನ ಹೊಡೆತದಿಂದ ಸತ್ತನೆ ಹೊರೆತು ಹೋರಾಟದಿಂದ ಅಲ್ಲ. ಅಲ್ಲದೆ ಇಂಧನ ಮುಗಿದರೂ ಯುದ್ಧ ವಿಮಾನವು ಆಕಾಶದಲ್ಲಿ ಬಹಳ ಹೊತ್ತು ತೇಲುತ್ತಾ ಹಾರುತ್ತಿರುವುದನ್ನು ಕಂಡು ಆಶ್ಚರ್ಯವಾಯಿತು. ಆದರೆ ನಿಜವಾಗಿಯೂ ಬೇಸರದ ಸಂಗತಿ ಎಂದರೆ ಲಕ್ಷಾಂತರ ಜನರ ಪ್ರಾಣ ಉಳಿಸಿದಂತಹ ಆ ವಿಮಾನದ ಪೈಲೆಟ್ ಕೊನೆಗೆ ಫ್ರೆಂಚ್ ಸೈನಿಕರ ವಶವಾದದ್ದು. ಇತನೆ Dunkrik ನ ನಿಜವಾದ ಹೀರೋ.🥹