ಪ್ರತಿಯೊಬ್ಬರ ಜನ್ಮ ಆಗುತ್ತಿದ್ದಂತೆ ಜೊತೆಯಲ್ಲಿ ಇನ್ನಿಬ್ಬರು ಹುಟ್ಟುತ್ತಾರೆ. ಅವರು ಅಗೋಚರವಾಗಿ ಪ್ರತಿಯೊಬ್ಬರ ಜೊತೆ ಕೊನೆಯವರೆಗೂ ಇರುತ್ತಾರೆ. ಒಬ್ಬ ಒಳ್ಳೆಯ ಆಲೋಚನೆ ಆದ್ರೆ ಇನ್ನೊಬ್ಬ ಕೆಟ್ಟ ಆಲೋಚನೆ. ಅವರ ವಾಸಸ್ಥಾನ ನಮ್ಮ ಮೆದುಳು. ಪ್ರತಿಯೊಂದು ವಿಷಯಕ್ಕೂ ನಮ್ಮ ಆಲೋಚನೆಯಲ್ಲಿ ಕೆಟ್ಟದ್ದೊ ಬರುತ್ತದೆ ಹಾಗೆ ಒಳ್ಳೆಯದೂ ಬರುತ್ತದೆ. ಬಹಳಷ್ಟು ಬಾರಿ ಸುಳ್ಳು ಹೇಳುವಷ್ಟು ಸಲೀಸಾಗಿ ಸತ್ಯವನ್ನು ಜನರ ಮುಂದೆ ಇಡಲು ಸಾವಿರ ಬಾರಿ ಯೋಚಿಸುತ್ತೇವೆ. ಜನ ಒಪ್ಪುತ್ತಾರೋ ಇಲ್ಲವೋ, ನನ್ನನ್ನು ತಪ್ಪು ತಿಳಿದರೆ, ಅವರಿಗೆ ಇಷ್ಟ ಆಗುತ್ತೋ ಇಲ್ಲವೋ, ಬಹಳಷ್ಟು ಜನ ಬೇಡ ಬೇಡ ಎನ್ನುತ್ತಿದ್ದಾರೆ ಅವರ ಮಾತು ಕೇಳಲೋ ಅಥವಾ ನನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಲೋ ಸಾವಿರಾರು ಪ್ರಶ್ನೆ. ಆದರೆ ಸುಳ್ಳು ಹೇಳಲು ಒಂದೇ ಯೋಚನೆ. ಯಾರಿಗೂ ಗೊತಿಲ್ಲವಲ್ಲ. ಸತ್ಯ ಯಾರಿಗಾದರು ಗೊತ್ತಾದಾಗ ನೋಡಿಕೊಂಡರೆ ಆಯಿತು. ಈ ಎರಡು ಆಲೋಚನೆಗಳು ಒಟ್ಟಿಗೆ ಮೂಡಿದಾಗ ನಮ್ಮ ಆಯ್ಕೆ ಏನಾಗಿರುತ್ತದೆ? ದೃಢ ನಿರ್ಧಾರ ಮಾಡಿ ಸತ್ಯಕ್ಕೆ ಮನ್ನಣೆ ಕೊಟ್ಟರೂ ನಮ್ಮಲ್ಲೇ ಇರುವ ದುಷ್ಟ ಆಲೋಚನೆಗಳು ನಮ್ಮ ಕ್ಷಣಿಕ ಸುಖಕ್ಕೆ ಪ್ರಾಮುಕ್ಯತೆ ಕೊಡುವಂತೆ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ನಮ್ಮಲ್ಲಿ ನಡೆವ ಈ ಎರಡು ಭಾವನೆಗಳ ನಡುವಿನ ತೊಳಲಾಟವೇ U ಮತ್ತು I. ನೀನಾ ನಾನಾ..