'#ಯಾನ' ಫ್ಯಾಮಿಲಿಯೊಂದಿಗೆ ಕೂತು ನೋಡಬೇಕಾದ ಅದ್ಭುತ ಸಿನೆಮಾ....
ಮೂರು ಕಾಲೇಜು ಯುವತಿಯರ ಜೀವನದಲ್ಲಿ ನಡೆಯುವ ಕಹಾನಿಯಿದು. ಇಂದು ಕಾಲೇಜು, ವಿದ್ಯಾಭ್ಯಾಸ, ಮೋಜು ಮಸ್ತಿ, ಪ್ರೀತಿ-ದ್ವೇಷದ ನಡುವೆ ಏನೇನು ಅನಾಹುತ ಸೃಷ್ಟಿಸುತ್ತೆ ಅನ್ನೋದು ಒಂದು, ಲವ್-ಕೃಷ್ ನಡುವಿನ ದುಡುಕುತನ ಇನ್ನೊಂದು, ಜೀವನ ಮತ್ತು ಕಮೀಟ್ಮೆಂಟ್ ನಡುವಿನ ಫ್ಯಾಮಿಲಿ ಅಟಾಚ್ಮೆಂಟ್ ನಿಜಕ್ಕೂ ಕಣ್ಣಲ್ಲಿ ನೀರು ತರಿಸುತ್ತೆ. ಇತ್ತೀಚೆಗೆ ನಮ್ಮನಿಮ್ಮ ನಡುವೆಯೇ ಸಂಭವಿಸುವ ಘಟನೆಗಳು ಇಲ್ಲಿ ಪಾತ್ರವಾಗಿ ತೆರೆಮೇಲೆ ಕಾಣಿಸಿ ನೈಜ್ಯತೆಗೆ ಹತ್ತಿರವಾಗಿ ಕಾಣಿಸುತ್ತಿದೆ. ಈ ಮೂರು ಪಾತ್ರಕ್ಕೆ ಬಣ್ಣ ಹಚ್ಚಿದ ಮೂವರು ಹಿರೋಯಿನ್'ಗಳೆ ಚಿತ್ರದ ರಿಯಲ್ ಹಿರೋಗಳು....