ಭೈರತಿ ರಣಗಲ್,
ಅಶ್ಲೀಲ ದೃಶ್ಯ, Double meaning ಸಂಭಾಷಣೆ ಇಲ್ಲದ ಚಿತ್ರ. ಇಲ್ಲೀವರೆಗೆ ಮಾಧ್ಯಮಗಳು ಮೌನವಹಿಸಿದ ತಾಲ್ಲೂಕೊಂದರ ವಾಸ್ತವ ಸ್ಥಿತಿಯನ್ನು ಮೊದಲಾರ್ಧ ಬಿಂಬಿಸಿದರೆ, ದ್ವಿತೀಯಾರ್ಧದಲ್ಲಿ ವಾಸ್ತವದಲ್ಲಿ ಸಾಧ್ಯವಾಗದ ಸುಖಾಂತ್ಯ ನೀಡುವ ಉದ್ದೇಶದಲ್ಲಿ Fantasy ತೋರಿಸಲಾಗಿದೆ. ಶಿವರಾಜ್ ಕುಮಾರ್ ಅರವತ್ತರಲ್ಲೂ ಆಕರ್ಷಕ ಎನಿಸುತ್ತಾರೆ. ಚಿತ್ರದುದ್ದಕ್ಕೂ ಆವರಿಸಿಕೊಳ್ಳುವ ಅವರ ಜವಾಬ್ದಾರಿಯುತ ನಡೆ ಗೌರವ ಮೂಡಿಸುತ್ತದೆ. ನಿರ್ದೇಶಕ ನರ್ತನ್ ಮತ್ತೊಮ್ಮೆ ಕನ್ನಡ ಚಿತ್ರರಂಗದ ಬಗ್ಗೆ ಭರವಸೆ ಮೂಡಿಸಿದ್ದಾರೆ.
Top story. Apt title. One of the best movies of Shivanna. Many times I had to convince myself it is just a movie.
Kudos to entire team.💐