'ಕಥೆಯೊಂದು ಶುರುವಾಗಿದೆ' ಚಲನಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಈ ಚಿತ್ರ ತುಂಬಾ matured ಆಗಿದ್ದು ,ಬಹಳ ಪ್ರಜ್ಞಾವಂತ ಚಿತ್ರ ವೀಕ್ಷಕರಿಗೆ ಇಷ್ಟ ಆಗುವುದರಲ್ಲಿ ಸಂದೇಹವೇ ಇಲ್ಲ.
ಚಿತ್ರದ ಕಥೆಯು ಮೊದಲಾರ್ಧದಲ್ಲಿ ಸ್ವಲ್ಪ ಬೋರಿಂಗ್ ಅನ್ನಿಸಿದ್ರು ಕೋಣೆಯಾರ್ಧದಲ್ಲಿ moving ಅನ್ಸುತ್ತೆ.
ಈ ಚಿತ್ರವನ್ನು ಹಲವಾರು ದೃಷ್ಟಿಕೋನಗಳಿಂದ ನೋಡಬಹುದು. ನಮ್ಮ ಜೀವನಕ್ಕೆ relate ಮಾಡ್ಕೊಳೋ scenesಗಳು ತುಂಬಾ ಸಿಗುತ್ತೆ.
ಪ್ರೀತಿಯ ವಿವಿಧ ರೀತಿಗಳು /ಪ್ರೀತಿಯನ್ನು ನಾವು ನೋಡುವ ರೀತಿ, ಈ ಚಿತ್ರದಲ್ಲಿ ಬಹಳ ಚೆನ್ನಾಗಿ ತೋರಿಸಿದ್ದಾರೆ.
ಮಕ್ಕಳಿಲ್ಲದಿದ್ದರೂ ಜೀವನ ಪ್ರೀತಿಯಿಂದ ಪರಸ್ಪರ ಸಂತೋಷದಿಂದ ಇರುವ ರಾಧಾ- ಮೂರ್ತಿಯರು
ಹೊಸ ಜೀವನದ ನಿರೀಕ್ಷೆಯಲ್ಲಿ ,ತನ್ನ business ಸರಿ ಆಗುತ್ತೆ ಅನ್ನುವ ಆಶಾಭಾವದಲ್ಲಿರುವ ನಾಯಕ ತರುಣ್(ದಿಗಂತ್)
ಜೀವನದಲ್ಲಿ ನೊಂದು ಮತ್ತೆ ಒಳ್ಳೆಯ ಜೀವನಕ್ಕೋಸ್ಕರ ,ಹಾಗೂ ಸ್ವಲ್ಪ ಬದಲಾವಣೆಗೆ ರೆಸೋರ್ಟ್ಗೆ ಬರುವ ನಾಯಕಿ ತಾನಿಯ( ಪೂಜಾ)
ರೆಸೋರ್ಟ್ನಲ್ಲಿ ಡ್ರೈವರ್ ಆಗಿರುವ ಪೆಡ್ರೋ ಅಲ್ಲಿಯ receptionist ಸ್ವರ್ಣಳನ್ನು ಪ್ರೀತಿಸುವ, ಆದರೆ ಅದನ್ನು ನಿವೇದಿಸಲು ಧೈರ್ಯವಿಲ್ಲದವನು.
ಸ್ವರ್ಣ ಹೇಳುವ ಪ್ರೀತಿ ಒಂದೇ ಇದ್ರೆ ಸಾಲಲ್ಲ ಮದ್ವೆ ಅನ್ನೋದು ಒಂದು responsibility, commitment..
'ಅಮೆರಿಕದಿಂದ ಯಾಕೆ ಇಲ್ಲಿಗೆ ಬಂದಿದ್ದು ?ಏನ್ problem ಆಯ್ತು' ಎಂದು ನಾಯಕಿ ತಾನ್ಯಾ ತರುಣ್ ನ ಕೇಳ್ದಗ 'ಮುಂದೇನು ಅನ್ನೋದೇ problem ಆಯ್ತು, ನಂಗೆ ಕೈ ತುಂಬಾ ದುಡ್ಡು, ಒಳ್ಳೆ lodgeಗಳಲ್ಲಿ ವಾಸ ಎಲ್ಲಾ ಇತ್ತು, ಆದ್ರೂ ಜೀವನ ಯಾಕೋ ಒಂದೇ ರೀತಿ ಅನ್ಸಕ್ಕೆ ಶುರು ಆಯ್ತು, ನಂಗೆ i was programmed ಅನ್ಸಕ್ಕೆ, ರೋಬೋಟ್ ಥರ ಅನ್ಸಕ್ಕೆ ಶುರು ಆಯ್ತು ಅದುಕ್ಕೆ ಅಮೆರಿಕ ಬಿಟ್ ಬಂದೆ' ಅಂತಾನೆ. ಇದು ಯೋಚಿಸುವಂತೆ ಮಾಡುತ್ತೆ.
ದಿಗಂತ್ ಅಭಿನಯ ತುಂಬಾ matured ಆಗಿದೆ.comedy ಪಾತ್ರದಲ್ಲಿ ನೋಡಿ ನೋಡಿ ದಿಗಂತ್ ನ capacity, ತಾಕತ್ತು ಗೊತ್ತೇ ಇರ್ಲಿಲ್ಲ.. ಇದ್ರಿಂದ ಗೊತ್ತಾಗುತ್ತೆ.
ದಿಗಂತ್ ಅಭಿನಯ ತುಂಬಾ ಇಷ್ಟ ಆಗುತ್ತೆ.
ಸಕ್ಕತ್ handsome ಆಗಿ ಕಾಣುಸ್ತಾನೆ.
ಪೂಜಾಳಿಗೆ ಅಷ್ಟು ಅಭಿನಯ ಬಂದಿಲ್ಲ.ಅವಳು ಮಾತನಾಡುವ ಕನ್ನಡ ಮಾತ್ರ ತುಂಬಾ worst ಆಗಿದೆ.
ಬಾಬು ಹಿರಿಯಣ್ಣಯ್ಯ ಮತ್ತು ಅರುಣ ಬಾಲರಾಜ್ ತುಂಬಾ ಚೆನ್ನಾಗಿ ತಮ್ಮ ಪಾತ್ರ ನಿಭಾಯಿಸಿದ್ದಾರೆ.
ಒಟ್ನಲ್ಲಿ ಚಿತ್ರ ಮಿಸ್ ಮಾಡಲೇ ನೋಡಿ.